ಸೋಮವಾರ, ಏಪ್ರಿಲ್ 8, 2019

902. ಹನಿಗಳು-38

: ಹಿತ

ಹಾಕಿದರೆ ಮತ
ದೇಶಕ್ಕೆ ಹಿತ!
ಮಾರಿದರೆ ಮತ
ದೇಶದ ಸರ್ವನಾಶ!
ಮತದಾರನಿಗೆ ಅಹಿತ!
ಗೆದ್ದವಗೆ ಹಿತ!!
@ಪ್ರೇಮ್@

: ಬದುಕು

ಮನವರಳಲು ಬದುಕು
ಭಾರವಾಗದು!
ಹೃದಯವರಳಲು ಬದುಕು
ಭಾರವಾಗದು!
ದುಡ್ಡಿನಾಸೆ ಬೆಳೆಯಲು ಬದುಕು
ಭಾರ, ಬೇಡವೆನಿಸುವುದು!
ನೆಮ್ಮದಿ ಇಲ್ಲವಾಗುವುದು!
ಕನಸು ಕರಗಿ ಹೋಗುವುದು!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ