ಸೋಮವಾರ, ಏಪ್ರಿಲ್ 29, 2019

966. ಹೇಗೆ ತೀರಿಸಲಿ?

ತೀರಿಸಲಿ ಹೇಗೆ?

ಹೊತ್ತ ತಾಯ್ನಾಡ ಋಣ ತೀರಿಸಲಿ ಹೇಗೆ?
ಹೆತ್ತ ತಾಯಿಗೆ ಗೌರವ ಕೊಡಲಿ ಹೇಗೆ?
ಸಾಕಿದ ತಂದೆಗೆ ಉಡುಗೊರೆ ಕೊಡಲಿ ಏನು?
ಬೆಳೆಸಿದ ಅಜ್ಜಿಗೆ ಮುದ ನೀಡಲಿ ಹೇಗೆ?

ಮಂಜಿನ ಮಳೆಯನು ಸುರಿಸದೆ
ಬೆಂಕಿಯ ಬರಹವ ಬರೆಯದೆ
ಮುಂದಾಲೋಚನೆಯಲಿ, ನಲುಗುವಂತಾಗದೆ
ಮುಸುಕಿನ ಪರದೆಯ ಸರಿಸುತಲಿ...

ಪಯಣದ ಬಾಳಲಿ ನೆನಪಲಿ ಸಾಗುತ
ಪಂಜರದೊಳಗಿನ ಪಕ್ಷಿಯಂತಿರಿಯಸದೆ,
ಪೃಥ್ವಿಯ ಮೇಲೆ ನಲಿದಾಡುತ ಬದುಕುತ,
ಅಂಬರವೇರುವ ಸಂತಸ ತಾಳುತ!

ಬಾಳುವೆ ಕೊಟ್ಟ ಸರ್ವಗೆ ಶರಣು!
ಕಾಯುತಲಿರುವ ಯೋಧಗೆ ನಮನ!
ಪೊರೆಯುತಲಿರುವ ದೇವಗೆ ಕೈಜೋಡಿಪೆ.
ತಿದ್ದುತ ಅಕ್ಷರ ಕಲಿಸಿದ ಗುರುವಿಗೂ ವಂದಿಪೆ!

ನಿಮ್ಮಯ ಪ್ರೀತಿಗೆ ಚಿರಋಣಿ ನಾನು
ಬಾಗುತ ಪೊಡಮಡುವೆನು ಸಕಲರಿಗೆ
ಏನನು ಕೊಡಲು ಕಡಿಮೆಯು ಅದುವೆ
ನನ್ನನೆ ನಾನರ್ಪಿಸಿ ಕೊಳ್ಳುವುದು ಸರಿಯೇನೋ...

@ಪ್ರೇಮ್@
25.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ