ಹಾಳಾಯಿತು...
ಜೆಸಿಬಿಯೆಂಬ ರಾಕ್ಷಸನ
ಹುಟ್ಟಿಸಿದ ಮಾನವ!
ಸ್ಪರ್ಶಿಸಿತು ಧರೆಸಿರಿಯ ಮೇಲೆ
ಒಕ್ಕಿ ಹಾಕಲು ಮಣ್ಣ...
ಹೂಳೆತ್ತಲು, ಅಗೆಯಲು, ಒಗೆಯಲು...
ಸಮತಟ್ಟಾಯಿತು ನೆಲವು
ನಾಶವಾಯಿತು ಗುಡ್ಡವು..
ಮಣ್ಣ ಗಟ್ಟಿಯಾಗಿ ಹಿಡಿದಿಟ್ಟಿದ್ದ
ಗಿಡ ಮರಗಳ ಬೇರುಸಹಿತ
ಕತ್ತರಿಸಿ ಉರುಳಿಸಿತು...
ಮಳೆನೀರು ತಾ ಇಂಗಿ
ಉಳಿದುದು ಲೀಲಾಜಾಲವಾಗಿ
ಹರಿದು ಹೋಗುತಲಿತ್ತು
ತೊರೆ ಸೇರಿ ನದಿಗಳಿಗೆ..
ನದಿಯಿಂದ ಸಾಗರಕೆ..
ಈಗಂತು ಹರಿಯಲು ಜಾಗವಿಲ್ಲ
ಮಣ್ಣ ಕಣ ಸೇರಿ ಕೆಸರಾಯ್ತಲ್ಲ!
ರಾಡಿಯ ಹರಿಸುವುದೆಲ್ಲಿ!?
ಸವಕಳಿಯ ತಂದಿತಲ್ಲ!
ಮರಗಿಡದ ಬೇರಿರದೆ ಹಾಳಾಯಿತಲ್ಲ!
ಮನುಜ ತಾ ತಿಳಿದವನು,
ಹೀಗೇಕೆ ಮಾಡುವನು?
ತನ್ನ ಕಾಲಿಗೆ ತಾನೇ
ಕೊಡಲಿ ಹಾಕುವ ಕಾರ್ಯವನು?
ಬುದ್ಧಿ ಕಲಿತು ಎಂದು ಬುದ್ಧನಾಗುವನು?
@ಪ್ರೇಮ್@
19.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ