ನೀ ನನ್ನ ಜೊತೆಗಿರುವೆ
ಮನದ ಶಿವ ನೀನು ನನ್ನ ಜೊತೆಗಿರುವೆ,
ಸದಾ ನನ್ನ ಜತೆ ನೀನು ಗೆಲುವಾಗಿ ಬರುತಿರುವೆ//ಪ//
ಮನದ ಮತ್ಸರವನ್ನು ನೀ ದೂರಗೊಳಿಸಿರುವೆ,
ಎಲ್ಲರನು ಒಂದಾಗಿ ಕಾಣಲು ಕರೆ ಕೊಟ್ಟಿರುವೆ,
ಜಾತಿ ಭೇದವ ಮರೆಸೊ ಪ್ರೀತಿಯನು ಕಲಿಸಿರುವೆ,
ಮಾನವತೆಯ ಗುಣದ ಬೀಜವನು ಬಿತ್ತಿರುವೆ//೧//
ಬದುಕ ಬಾಗಿಲ ತೆರೆದು ಪ್ರೇಮವನು ಹಂಚಿರುವೆ
ಬಾಳ ಸುಖದಲಿ ನಿನ್ನ ಅಭಯವನು ನೀಡಿರುವೆ!
ಭಕ್ತಿಗಾಗಿಯೆ ನಾನು ಒಲಿವೆಯೆನ್ನುದ ಅರುಹಿರುವೆ
ಭವದ ನೋವನು ತೊಳೆದು ನಗಿಸಿರುವೆ//೨//
ಮೌನದಲು ನನಗೆ ಮಾತ ಕಲಿಸಿರುವೆ,
ನೀನೆನ್ನ ಜೊತೆಗಿದ್ದು ಶಕ್ತಿ ಸ್ಫುರಿಸುತಲಿರುವೆ,
ಮನದಿ ತುಂಬಿದಹಂಕಾರವನು ನಾಶ ಗೊಳಿಸುತಲಿರುವೆ,
ಮಾತಿನಲು ಕೃತಿಯಲ್ಲು ಭಕ್ತಿ ಬೆಳೆಸಿರುವೆ//೩//
ನೀ ಜೊತೆಯಲಿದ್ದು ಬಾಳು ಬೆಳಗಿರುವೆ,
ಹರುಷದ ವರ್ಷದ ವರವ ನೀಡಿ ಸಲಹುತಲಿರುವೆ,
ನಿತ್ಯ ಸತ್ಯದ ನುಡಿಯ ನನಗೆ ಕಲಿಸಿರುವೆ
ನ್ಯಾಯ ನೀತಿಯಲಿ ನಡೆವ ಬುದ್ಧಿ ನೀಡಿರುವೆ//೪//
@ಪ್ರೇಮ್@
13 04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ