ಮಂಗಳವಾರ, ಏಪ್ರಿಲ್ 9, 2019

903. ಅಮ್ಮ

ಖುಷಿಯ ಖನಿಗೆ

ಖುಷಿಯ ಖನಿ ನಾನುರಸಋಷಿಯು ನಿಜ ನೀನು//
ನನ್ನ ಹೆಣ್ಣು ಮಗುವು ಎಂದೂ ಬಿಸುಟಲಿಲ್ಲ ತೊಟ್ಟಿಯಲಿ//ಖುಷಿಯ//

ತೊರೆಯಲಿಲ್ಲವು ಮಗುವ ಹೆಣ್ಣು ಹುಟ್ಟಿತು ಎಂದು,
ಆಶ್ರಮದ ತೊಟ್ಟಿಲಿಗೆ ನಿರ್ದಯದಿ ನೀನೆಸೆಯಲಿಲ್ಲ!
ಮನದ ನೋವದು ಎಲ್ಲ ಮರೆತೆ ನನ್ನನು ನೋಡಿ,
ಎಡೆಬಿಡದೆ ಸಾಕಿರುವೆ ವಿದ್ಯೆ ಬುದ್ಧಿಯ ನೀಡಿ//ಖುಷಿಯ//

ನನ್ನ ಮೌನವನೂ ನೀ ತಿಳಿದುಕೊಂಡು,
ಬೇಕುಬೇಡಗಳ ಪೂರೈಸಿ ಬೆಳೆಸಿರುವೆ!
ಮಗುವ ಕಾವಲು ಕಾಯುತಲಿ
ತನ್ನೆಲ್ಲ ನೋವು ಮರೆತು ನೋಡಿದ ತಾಯಿಯೇ ನಿನಗಿದೋ ನಮನ//ಖುಷಿಯ//

ಏನು ಎತ್ತಣ ಎಂದು ನಾನರಿಯದಾದಾಗ
ಕೈಹಿಡಿದು ನಡೆಸಿದಾ ದೇವಿ ನೀನಮ್ಮ!
ಮಗುವ ಸುಖದಲೆ ತೇಲಿ ತನ್ನ ಕಷ್ಟವ ಮರೆತ
ರಸಗಳಿಗೆಗಳ ನೆನಪ ಪಡಿಯಚ್ಚಿನಲಿ ಮೆರೆದ//ಖುಷಿಯ//
@ಪ್ರೇಮ್@
10.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ