ಶುಕ್ರವಾರ, ಏಪ್ರಿಲ್ 12, 2019

913. ಜೊತೆಯಲಿರುವೆ

ಜತೆಯಾಗಿರುವೆ ನಾನೆಂದೂ..

ಪ್ರಾಣ ಸಖನೆ ವೇಣು ಹಿತನೇ
ಮನದ ಒಡೆಯ ಕೃಷ್ಣನೇ..
ಎಲ್ಲೇ ಇರು ಹೇಗೇ ಇರು
ಮನದ ಜೊತೆಗೆ ನಾನಿರುವೆನು..

ಕೆಲಸ ಕಾರ್ಯ ಮರೆಯಬೇಡ
ಹಲವು ದಾರಿ ಬದುಕಿಗೆ..
ಜನರ ಬಾಳ ಉದ್ಧರಿಸುತ
ಕಳೆವ ಭರದ ಕ್ಷಣಗಳಿಗೆ..

ನೊಗಕೆ ಭುಜವ ಕೊಟ್ಟು ನಾನು
ಬರುವೆ ನಿನ್ನ ಜೊತೆಯಲಿ,
ಎಂದೆಂದೂ ಹೀಗೆ ಸಾಗಬೇಕು
ಜೀವನ ಯಾನ ನಗುವಲಿ..

ಸತ್ಯ ಧರ್ಮ ನಿಷ್ಠೆಗಳಲಿ ನಿತ್ಯ
ಬದುಕೊ ಜೀವದುಸಿರ ಹನಿಯಲಿ
ವರವ ನೀಡಿ ಗೆಲ್ಲಿಸುತ್ತ ಇರುವ
ನಾವು ಎಂದೂ ಜೊತೆಯಲಿ..
@ಪ್ರೇಮ್@
12.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ