ಕವಿಗಳೇ..
ಕಟುಕರಾಗದೆ ಕೆಡುಕ ಕುಟುಕುವಂತವರಾಗಿ..
ಕಡು ಬಡವರಾದರೂ ಕರುಳ ಸ್ನೇಹವರಿತವರಾಗಿ..
ಕಂದಕಗಳ ಸೃಷ್ಠಿಸದೆ ಕಂದರಂತೆ ಮುಗ್ದರಾಗಿ...
ಕದನಕೆ ಸಾಗದೆ ಕಥನದ ತೆರದಲಿ
ಕವನವ ಗೀಚುತ ಖಡ್ಗದ ಪೆನ್ನಲಿ
ಕಂಪನು ಸೂಸುತ ಇಂಪಲಿ ಹಾಡುತ
ಕರುನಾಡಲಿ ಶಾಂತಿಯ ಎಲ್ಲೆಡೆ ಬಿತ್ತುತ...
ಬಾಳುವೆ ಕಲಿಯಲಿ ಬಾಳನು ಬೆಳಗಲು
ಬಂಗಾರ ಕಾಣಲಿ ಪ್ರತಿ ಪದದಲ್ಲು,
ಬಂಧನ ಬಿಸುಟು ಜನ ಸ್ವತಂತ್ರರಾಗಲಿ
ನಿಮ್ಮಯ ಕವನವು ಬಡಿದೆಬ್ಬಿಸಲಿ...
ಸತ್ಯದ ಮಂತ್ರವ ಸಾರುತ ಸಾಗಲಿ,
ನಿತ್ಯವು ಕಷ್ಟವ ದೂಡುತ ನಡೆಯಲಿ..
ಮಿಥ್ಯದ ಬದುಕು ನಾಶವೆ ಆಗಲಿ,
ಬರಹವು ಜೀವನ ಪಾವನಗೊಳಿಸಲಿ..
ಕವನವು ನಾಡಿನ ಕಣ್ಣನು ತೆರೆಸಲಿ,
ಕತೆಗಳು ಜನರ ಮನವನು ಬೆಳಗಲಿ,
ಲೇಖನ ವೇತನಕಾಗಿ ಬರದಿರಲಿ..
ರಚನೆಯು ಪಚನದಿ ಸೇರುತ ನಲಿಯಲಿ..
@ಪ್ರೇಮ್@
22.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ