ದಿಗಂತ
ದೇವ ಹಾಕಿಹ ಬೆಸುಗೆ ಈ ಬಗೆ
ಭೂಮಿ ಬಾನಿನ ನಿತ್ಯ ನಂಟಿಗೆ!
ಬಾಗಿ ಬಾನದು ಸೇರಿ ಅವನಿಯ
ಯೋಗ ಎದೆಯಲಿ ನಲಿವ ಜೀವಿಯ//
ಬಂಧಿ ತಾನು ಬಾನು ಬುವಿಯ-
ಪ್ರೀತಿ ಚಾದರ ಹಾಸ ನಡುವಲಿ!
ದಿಗಂತ ರವಿಯ ಹಗಲು ಏರಿಸಿ
ನಿತ್ಯ ಸಂಜೆ ಕರೆವ ಕೂರಿಸಿ//
ಕಿರಣ ಪ್ರೀತಿಯ ಸುರಿಸಿ ಮೆರೆದು
ಜೀವ ಕುಲಕೆ ಬೆಳಕು ಜಿಗಿದು,
ತಂಪು ಹುಣ್ಣಿಮೆ ಬಾನ ಬಯಲಲಿ
ಕಪ್ಪು ಆಗಸ ಅಮವಾಸ್ಯೆ ದಿನದಲಿ//
ನಗುತ ಬಾನದು ಬಾಗಿ ಬರಲು
ಸ್ವಾಗತ ಕೋರಿದೆ ಕಡಲ ಒಡಲು
ಬಾಗಿ ಬಳುಕಿ ಗುರಿಯ ಸೇರಲು
ದಿಗಂತ ಜೀವಿಗೆ ನೋಡಿ ಕಲಿಯಲು//
@ಪ್ರೇಮ್@
05.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ