ಕವಿಗಳು
ಚಿರ ಬಾಂಧವ್ಯಕೆ ಸಾಕ್ಷ್ಯದಂತಿರಬೇಕು
ಕವಿ ಮನಗಳ ಸಂಬಂಧ..
ತಾ ಬೆಳೆದು ಇತರರ ಬೆಳೆಸುತಲಿ..
ತಾ ಬರೆದು ಪರರನು ಓದುತಲಿ..
ತಪ್ಪುಗಳ ಸರಿಪಡಿಸುತಲಿ..
ಗೆಳೆಯರಿಂದ ಸದಾ ಕಲಿಯುತಲಿ..
ಆನಂದದ ಭಾವಗಳ ಹಂಚುತಲಿ..
ಇಷ್ಟವಾದ ಸಾಲುಗಳ ತಿಳಿಸುತಲಿ...
ಸಂಕಟದಲಿ ಸಹಾಯ ಹಸ್ತ ನೀಡುತಲಿ
ಪಂಕಜದಂತೆ ಕೆಸರಲೂ ಅರಳುತಲಿ
ವಂಚನೆಯಿಲ್ಲದೆ ಸಮಾಜವ ತಿದ್ದುತಲಿ..
ತನ್ನ ಜೀವನದಿ ಉತ್ತಮಗೊಳ್ಳುತಲಿ..
ವಂದನೆ ಪಡೆದು ವಂದಿಸಿಕೊಳ್ಳುತ,
ಹಿಗ್ಗದೆ ಕುಗ್ಗದೆ ಜನರನು ತಿದ್ದುತ,
ವಸುಂದರೆಯೊಳದೆ ನಿರಂತರ ನಗುತ, ನಗಿಸುತ
ಕವಿಗಳು ಬದುಕಲಿ ಪರೋಪಕಾರಿಯಾಗುತ..
@ಪ್ರೇಮ್@
22.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ