ಮಂಗಳವಾರ, ಏಪ್ರಿಲ್ 9, 2019

908. ಸಮಯ

ಸಮಯ

ಬದುಕಿನ ಸಿಂಹಾವಲೋಕನವಿದು
ಸಿಡುಕಿನ ಕಾಲವಲ್ಲವಿದು!!
ಪಡೆದ ಜ್ಞಾನವ ಬಳಸುವ ಸಮಯ
ಬಾಳಿನ ಮುಸ್ಸಂಜೆಯು ಇನಿಯ!!

ಚಿಪ್ಪಿನೊಳಗಿಂದ ಹೊರಗಡೆ ಬಂದು
ತಾನು ಕಲಿತುದ ಸಮಾಜಕೆ ತಂದು,
ಮನೆ ಮನ ಗೆದ್ದು ಮಾರು ಗೆಲ್ಲೆಂದು,
ಬುದ್ಧಿಯ ಹೇಳುವ ಸಮಯವು ಇಂದು..

ಮಕ್ಕಳು ದೂರ, ಕಾರ್ಯದ ಭಾರ!
ನನಗೆ ನೀನು ನಿನಗೆ ನಾನು ಭರಪೂರ!
ಹಾರಾಡಲು ಬಹುದು, ಇಲ್ಲವು ಪಂಜರ!
ಜನಸೇವೆಯು ಆಗಲಿ ನಿತ್ಯ ನಿರಂತರ!!

ದಿನಗಳ ಸಿಹಿಕಹಿ ರುಚಿಯನು ನೋಡಿ,
ಮನಗಳ ಅಳೆಯುತ ತುಲನೆಯ ಮಾಡಿ!
ಪಕ್ವತೆ ಪಡೆಯುತ ಬಹಳವೆ ಗುದ್ದಾಡಿ!
ಬಾಳಿನ ಇಳಿ ಸಂಜೆಯಲಿ ಆಟವನಾಡಿ!!

ಸಂತಸದಲಿ ಸಮಯವ ಜಾರಿಸಿ ಕಲಿಸುತ,
ಕಲಿತಿಹ ಪಾಠವ ಕಿರಿಯಗೆ ತಿಳಿಸುತ,
ಹೊಸಹೊಸ ವಿದ್ಯೆಯ ತಾನೂ ಕಲಿಯುತ!
ಪ್ರತಿ ದಿನಗಳ ಖುಷಿಯ ಕ್ಷಣಗಳಾಗಿಸುತ!!

@ಪ್ರೇಮ್@
03.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ