ಶುಕ್ರವಾರ, ಏಪ್ರಿಲ್ 19, 2019

943. ಜೀವನದಾಟ

ಜೀವನದಾಟ

ಜನರಿಗೆ ಬದುಕಲಿ ಆಟವ ಆಡಲು ಸಂತಸ,
ನನ್ನ ಜೀವನವೇ ಕ್ರಿಕೆಟಾಯಿತು ನೋಡು ನಿರಂತರ !
ವಿಕೆಟಿನ ಸಮೀಪವು ಎದುರು ನಾನಿಂತು ಕಾಯುತಲಿರುವೆ ಎನ್ನರಸ!
ಚೆಂಡದು ಬರಲು ಬ್ಯಾಟಲಿ ಹೊಡೆದು ಕಳಿಸಲು ಕಾದಿರುವೆ ದೂರ!!

ರನ್ ಗಳ ಮಳೆಯನು ಸುರಿಸಲು ಬೇಕು..
ಬೆನ್ನ ಹಿಂದೆ ಇರುವ ಕೀಪರ್ ನೋಡು..
ಬೌಲರ್ ಎಸೆತವ ಬಿಡದೆ ಉರುಳಿಸೆ ಸಾಕು!
ಸಾಗಲು ಅಂದವು ಚೆಂಡದು ಹೊರಗಿನ ಜಾಡು!

ಸುಖದ ದಿನಗಳು ನಮಗದು ಸಿಗದು!
ದೇಶದ ಪ್ರತಿನಿಧಿ ನಾವೇ ಅಲ್ಲವೆ?
ಆಡುವ ಮೊದಲು ತಯಾರಿ ಇರದೆ ಆಗದು!
ದೇಹಕೂ ಮನಕೂ ಶಕ್ತಿ, ಬಲ, ವ್ಯಾಯಾಮ ಕೊಡುವೆ!

ನಮ್ಮಯ ಆಟವು ದೇಶಕೆ ಖುಷಿಯು...
ಗೆದ್ದೆಡೆ ಎಲ್ಲೆಡೆ ಕೀರ್ತಿಯ ಅಲೆಯು...

@ಪ್ರೇಮ್@
20.04.2019
(ಸುನೀತ-ಸಾನೆಟ್ ನ ಪ್ರಯತ್ನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ