ಅನುವಿಗೆ ಅಭಿನಂದನೆಗಳು
ಅನುವಿನ ಬದುಕು ಅವನಿಯೊಳು ಅನುರಣಿತಗೊಳ್ಳಲಿ.
ಅವಿರತ ಪ್ರೀತಿ ಅನವರತ ಸಿಗಲಿ..
ಅವಸರವಿರದೆ ಅರಿವು ಹೆಚ್ಚಾಗುತಿರಲಿ..
ಅಂಜದೆ ಬದುಕುವ ಗುಂಡಿಗೆ ಇರಲಿ..
ಅರಿವಿನ ಬಾಳಲಿ ಅಕ್ಷರ ಬೆಳಗಲಿ..
ಅಂಜದ ಎದೆಯಲಿ ಪ್ರೀತಿ ಅಮರವಾಗಿರಲಿ.
ಅಂಬಿಗನಂತೆ ಗುರುವಿನ ಆಶೀರ್ವಾದ ಜೊತೆಗಿರಲಿ.
ಅವಕಾಶಗಳು ಅವಶ್ಯವಾಗಿ ಒದಗಿ ಬರಲಿ..
ಅಂದದ ಬದುಕಲಿ ಚಂದದ ನಗುವಿರಲಿ..
ಬೃಂದಾವನದ ಆಸರೆ ಜೊತೆಗಿರಲಿ..
ಅಡಿಗಡಿ ಅಂಬರದೆಡೆ ಕಾರ್ಯವು ಏರಲಿ.
ಶರ್ಮಿಳಾ ತಾಳ್ಮೆಯು ಆಗಮಿಸಿರಲಿ..
ಅದೃಷ್ಟ ಲಕ್ಷ್ಮಿಯು ಒಲಿಯುತ ಬರಲಿ
ಸರಸ್ವತಿ ವೀಣೆಯ ನುಡಿಸುತ ಹಾಡಲಿ!
ಅರಗಿಣಿಯಂದದ ಹಸಿರದು ಬಿರಿಯಲಿ.
ಚಂದಿರನಂದದ ಶ್ವೇತ ಪ್ರಭೆ ಬಿರಿಯಲಿ..
ಅಶ್ವಿನಿ ದೇವತೆ ಕೃಪೆಯನು ತೋರಲಿ.
ಅದೃಷ್ಟ ದೇವತೆ ನಿನ್ನಲೆ ನಿಲ್ಲಲಿ..
ಅಹಂಕಾರದ ಮೊಳಕೆಯು ಸಾಯಲಿ!
ಅಂಬರದೆಡೆಗೆ ಬಾಳ ಬಳ್ಳಿಯು ಹಬ್ಬಲಿ..
ಅರಸಿಯ ಜಾಣ್ಮೆಯು ಅರಸುತ ಬರಲಿ!
ಆಸೆಯು ಪೂರೈಸಿ ಅಂದದಿ ಬದುಕಲಿ!
ಆಕಾಶದೆತ್ತರ ಅರಮನೆಯಲಿ ನಗುತಲಿ!
ಅಂಕುರವಾಗಲಿ ಅಂದದ ಕ್ಷಣಗಳು ಬಾಳಲಿ..
ಅಕ್ಷತೆಯಂದದಿ ಅವಮಾನವು ಬರದೆ
ಆಸರೆಯೊಳು ಅನುಭವ ಅನುರಣಿಸಲಿ..
ಅಮರವಾಗಿರಲಿ ಬಾಳ ಜ್ಯೋತಿಯದು..
ಅದ್ಭುತ ರೇಖಾಚಿತ್ರದಂತೆ ಮೂಡಲಿ..
ಅಮರ ಪ್ರೇಮ ಕಾವ್ಯ ಅನವರತ ಚಿಮ್ಮಲಿ.
ಅವಸಾನವಿರದ ರಮ್ಯ ಪದ ಪಡಿಮೂಡಲಿ.
ಅದಮ್ಯ ಚೇತನದಿ ಬಾಳ ತೇರು ಸಾಗುತಲಿರಲಿ.
ಗಿರಿ-ಕಂದರದಲಿ ಪಲ್ಲವಿಯಂತೆ ಮಾರ್ದನಿಸಲಿ..
ಅಗಣಿತ ಶೀಲತೆ ಅಕಂಡದಿ ಆಕರಗೊಳ್ಳಲಿ..
ಆರರ ವಿಭಾ ಪ್ರಭೆ ಏರುತಲಿರಲಿ..
ಅಂದದ ರೂಪವು ಅಂಕೆಯ ಮೀರದಿರಲಿ..
ಆಕಾಂಕ್ಷೆಯ ಜೀವನ ಸುನೀತ ಕಾವ್ಯವಾಗಲಿ..
@ಪ್ರೇಮ್@
22.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ