ಮಂಗಳವಾರ, ಏಪ್ರಿಲ್ 16, 2019

922. ಏನದು?

ಮನ

ಆ ಸಣ್ಣ ವಿಷಯವದು
ಪ್ರಳಯ ತಂದಿತ್ತಿತವರೀರ್ವರ ಬಾಳಿನಲಿ...
ಯಾವುದಾ ಭಯಂಕರ ವಿಷಯ?
ವಿಚ್ಛೇದನವಾಗುವಷ್ಟು ಬೃಹತ್ ಅಲೆ ತಂದ ಸಾಗರ?

"ನನಗೆ ನೀನು ಬೇಡ, ನಿನ್ನ ಸೈರಿಸಲಾರೆ"
"ನನಗೂ ನೀನು ಬೇಡ, ಮುಂದೆ ನಿನ್ನೊಡನಿರಲಾರೆ"
"ನಡೆ ಲಾಯರ್ ಬಳಿಗೆ, ದಾಖಲಿಸು ನಿನ್ನ ಸಹಿಯ!"
"ನಿನ್ನೊಡನೆ ಬಾಳುವೆ, ಭಾವನೆ ಯಾವುದಕ್ಕೂ ಅರ್ಥವಿಲ್ಲ, ನಡೆ"

ಲಾಯರ್ ಬುದ್ಧಿ ಹೇಳಿದರು, ದುಡುಕುತನ ಒಳ್ಳೆಯದಲ್ಲ ಯೋಚಿಸಿ ನೋಡಿರೆಂದು ಮಾನವನಾಗಿ ನುಡಿದರು!ಕೇಳುವ ಕಿವಿಗಳೇ ಇರಲಿಲ್ಲ!
ಹಿರಿಯರು ಒಟ್ಟಾದರು, ಮಾತುಕತೆ ನಡೆಯಿತು, ಫಲಿಸಲಿಲ್ಲ!

ಆಸ್ತಿ, ಮನೆ,ಮನ, ಜಾಗ, ತೋಟ, ಬಟ್ಟೆಬರೆ ಎರಡಾಯಿತು!
ಭಾವನೆಗಳು ಸತ್ತು ಹೋದವು!
ಬದುಕಿನಾಸೆ ಕುಂದಿ ಹೋಯಿತು!

ಇಷ್ಟಕ್ಕೂ ತಮ್ಮ ಒಂದಾದ ಬದುಕನ್ನು ಎರಡು ಮಾಡಿದ
ಆ ಪ್ರಳಯಾಂತಕ ವಿಷಯವೇನು ಗೊತ್ತಾ?
"ಮುಂದೆ ಹುಟ್ಟುವ ನಮ್ಮ ಮಗುವಿಗೆ
ಯಾವ ಹೆಸರು ಇಡುವುದು???!!!!"

@ಪ್ರೇಮ್@
17.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ