[3/19, 1:39 PM] Wr Siraj Ahmed Soraba: ***ಪ್ರೇಂ ಸಹೋದರಿ**
ಲೇಖನಿಯ ವಿಷಯವನ್ನು
ಬಳಸಿಕೊಂಡು ಲೇಖನಿಯ
ವೇದನೆಯನ್ನು ಭಿನ್ನವಾದ
ರೀತಿಯಲ್ಲಿ ಮನಮುಟ್ಟುವ ರೀತಿಯಲ್ಲಿ ಬರೆದಿದ್ದೀರಿ.
ನಿಜವಾಗಿಯೂ ಈ ಕಂಪ್ಯೂಟರ್ ಮೊಬೈಲ್ ಲ್ಯಾಪ್ ಟಾಪ್ ಗಳ ಯುಗದಲ್ಲಿ
ಲೇಖನಿಯ ಕಡೆಗೆ ಗಮನ
ಕಡಿಮೆಯಾಗುತ್ತಿದೆ.
ನಮ್ಮ ಶಾಲಾದಿನಗಳಲ್ಲಿ ನಾವು
ಕಡ್ಡಿಯಿಂದಲೇ ಎಷ್ಟೋ
ಹೋಮ್ ವರ್ಕ್ ಗಳನ್ನು ಮಾಡುತ್ತಿದ್ದೆವು. ಆಗ ಹೊಸ
ಲೇಖನಿ ಸಿಕ್ಕಿದರೆ ಖುಷಿ ಪಡುತ್ತಿದ್ದೆವು.ಆದರೆ ಕಾಲ ಎಷ್ಟೇ ಬದಲಾದರೂ ಲೇಖನಿಯ ಅವಶ್ಯಕತೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ಅಲ್ಲಗಳೆಯಲೂ ಆಗದು.
ನಿಯಮಾನುಸಾರವಾಗಿ ಗಜಲ್
ಬರೆದ ತಮಗೆ ಹೃತ್ಪೂರ್ವಕ ಅಭಿನಂದನೆಗಳು.
***ಯು ಸಿರಾಜ್ ಅಹಮದ್ ಸೊರಬ***
[3/20, 10:41 AM] Wr 100 Ahmd: ಪ್ರೇಮ್ ಗುರುಗಳೆ
ಪ್ರಕೃತಿಯ ಪ್ರೇಮ ಅದರ ವಿನಾಶದ ಬಗ್ಗೆ ಆಳವಾಗಿ ಗಝಲ್ ರೂಪದಲ್ಲಿ ಕಾವ್ಯವನ್ನು ವ್ಯೆಕ್ತಪಡಿಸಿ ಗೆಲ್ಲುವಲ್ಲಿ ಯಶಸ್ಸು ಗಳಿಸಿದ್ದಿರ
ಒಂದು ಕಿವಿ ಮಾತು ಅಷ್ಟೇ ಗಝಲ್ ಸ್ವತಂತ್ರದ ಪ್ರತೀಕ ಇದೆ ಒಂದು ದೊಡ್ಡಮಟ್ಟದ ಚಳುವಳಿ ಮಾಡಿತು ಅದೆಷ್ಟ ಗಝಲ್ ಕಾರರು ಹುಟ್ಟಿಕೊಂಡರು ನಮ್ಮ ಗಝಲ್ ಗಳಲ್ಲಿ ಇಂಗ್ಲಿಷ್ ಪದ ಬಳಸುವುದಿಲ್ಲ ಬದಲಾಗಿ ಅನ್ಯ ಭಾರತೀಯ ಭಾಷೆ ಬಳಸುತ್ತೇವೆ ಎನ್ನುತ್ತಾ ಸರ್ ಅಲ್ಲಾಮ ಇಕ್ಬಾಲ್ ಸಾಹೇಬರು ಪ್ರತಿಜ್ಞೆ ಮಾಡಿಬಿಟ್ಟರು ಅಂದಿನಿಂದ ಇಂದಿಗೂ ಆಂಗ್ಲ ಭಾಷೆ ಬಳಕೆಯಾಗಿಲ್ಲ ಬದಲಾಗಿ ಶೇರ್ ಮತ್ತು ಶಾಯರಿಗಳಲ್ಲಿ ಉಪಯೋಗಿಸಿದ್ದಾರೆ
ಧನ್ಯವಾದಗಳು
[3/20, 11:52 AM] Wr Siraj Ahmed Soraba: ***ಪ್ರೇಂ ಸಹೋದರಿ***
ಪ್ರಕೃತಿಯ ಕಾಳಜಿ ಹೊತ್ತ ಗಜಲ್ ಪ್ರಸ್ತುತ ಸನ್ನಿವೇಶದಲ್ಲಿ
ಸೊಗಸಾಗಿ ಮೂಡಿ ಬಂದಿದೆ.
ನರರ ವಿಕೃತಿಗಳಿಂದ ಬೇಸತ್ತ
ಭೂಮಿತಾಯಿ ಮಾನವಕುಲವನ್ನು ಎಚ್ಚರಿಸುತಿದೆ ನನ್ನ ಒಲುಮೆಯಿಲ್ಲದೆ ನಿಮ್ಮ ಉಳಿವಿಲ್ಲವೆಂದು ಬುದ್ಧಿ ಹೇಳುವ ಗಜಲ್ ಇಷ್ಟವಾಯಿತು
ಹಾಗೆಯೇ ನಾನು ಯಾವಾಗಲೂ ಹೇಳುವುದು
ಸಾಲುಗಳ ತೂಕದ ಬಗ್ಗೆ
ಎಲ್ಲಾ ಚರಣಗಳು ಸಮತೋಲಿತವಾಗಿದ್ದರೆ ಗಜಲ್
ಇನ್ನೂ ಸೊಗಸಾಗಿರುತ್ತದೆ.
ಹೃತ್ಪೂರ್ವಕ ಅಭಿನಂದನೆಗಳೊಂದಿಗೆ
***ಯು ಸಿರಾಜ್ ಅಹಮದ್ ಸೊರಬ***
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ