ಪದ ಸಂಗಾತಿ
ಪದ ಸಂಗಾತಿಯೆ ಪ್ರಣಯವು ನಿನ್ನೊಳು
ಪದಗುಚ್ಛವ ಹಾಡುತ ಪಾಡಲು!!
ಪದಲಾಲಿತ್ಯವ ತಿಳಿಸೆಲೆ ಮನದೊಳು
ಕೈಯಿಂದುರುಳಿ ಬಾಯಿಗೆ ಬರಲು..//
ಪಾಪದ ಪದಗಳು ಬಳಿ ಬರದಿರಲಿ..
ಪುಣ್ಯದ ಕಾರ್ಯಕೆ ಸ್ಪಂದನೆ ಬರಲಿ..
ಪಾಪುವಿನಂತೆ ಮೈಮರೆತಿರಲಿ..
ಪಾಲಕರಂತೆ ಜವಾಬ್ದಾರಿಯು ಬರಲಿ...//
ಪಕ್ಕನೆ ಪನ್ನೀರ ಎರೆಯುತ ನೀ ಬಾ..
ಪಳ್ಳನೆ ಹೆಳೆಯುತ ಮೆದುಳಿಗೆ ಬಾಬಾ..
ಪಂಕದ ಹಾಗೆ ತಿರುಗುತ ನೀ ಬಾ!!
ಪಚ್ಚೆಯ ಬಣ್ಣದ ಪ್ರಕೃತಿಯಂದದಿ!//
ಕರೆವೆನು ನಿನ್ನ ಪದಗಳ ಬಂಡಿಯೆ
ಮರೆಯೆನು ಭಾಷೆಯ ನುಡಿಗಳ ಮಣಿಯೆ!
ಆಡುವೆನು ನಿತ್ಯವು ಕನ್ನಡ ತಾಯಿಯೆ
ಪದರಂಗಿತದಲಿ ದೇವರ ಮಾಯೆ//
@ಪ್ರೇಮ್@
02.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ