ಸೋಮವಾರ, ಏಪ್ರಿಲ್ 29, 2019

971. ಪ್ರೀತಿ ಹಕ್ಕಿ

ಪ್ರೀತಿಹಕ್ಕಿ

ನನ್ನೆದೆಯ ಹಕ್ಕಿಯದು ಹಾರಿದೆ
ನಿನ್ನೊಲವತ್ತ...
ಅತ್ತಿತ್ತ ನೋಡುತ್ತ...
ಪ್ರೀತಿ ಕಾಳನು ಹುಡುಕಾಡುತ್ತ....

ಮೌನದಿಂದಲೆ ಬಂದು ಬರಸೆಳೆದು ತಬ್ಬುತ್ತ..
ಪ್ರೇಮ ರಾಗಗಳ ಎದೆಯೊಳಗೆ ಹಾಡುತ್ತಾ..
ಮನದ ಭಾವವ ಬಿರು ಮಳೆಯಾಗಿ ಸುರಿಸುತ್ತ..
ಪ್ರೀತಿಯುದಕಕೆ ಹಾತೊರೆದು ಕರೆಯುತ್ತಾ...

ತುಟಿಯ ಜೇನನು ಹೀರೊ ಬಯಕೆಯನು ತೋರುತ್ತಾ..
ಕೈಯೊಳಗೆ ಕೈಯನಿಟ್ಟು, ಕಣ್ಣಲ್ಲೆ ಮಾತನಾಡುತ್ತ..
ಇಂಚಿಂಚು ಪ್ರೀತಿಯ ಮೊಗೆ ಮೊಗೆದು ಕುಡಿಯಲೆಂದು
ನಿನ್ನೆದೆ ಗೂಡಿನೊಳಗೆ ಹಾರಿ ಬಂದಿದೆಯಿಂದು..

ಮೊಟ್ಟೆಯಿಡುವ ಮುನ್ನ ಗರಿಗರಿಯಾದ ಗರಿಗಳಲಿ
ಗೂಡ ಕಟ್ಟುವ ತವಕ...
ಗೂಡಿನೊಳು ಬೆಚ್ಚಗೆ ನಿನ್ನ ಸೇರಿ
ಮಲಗಿ ದಣಿವಾರಿಸೊ ಪುಳಕ!!

ಪ್ರೀತಿಯಪ್ಪುಗೆಯಲಿ ಮೈ ಮರೆತು
ಪ್ರೇಮ ಪಕ್ಷಿಗಳೆರಡು ಸೇರಿ
ಆಗಸದಿ ಸ್ವಚ್ಛಂದದಿ ಹಾರುತ್ತಾ
ಸಮಯ ಕಳೆಯುವ ಮನಸು..

ಪಾಶ ಬಂಧನವ ಕಿತ್ತೊಗೆದು
ಸ್ವತಂತ್ರ ಪ್ರೀತಿಯ ಅನುಭವಿಸೋ ಸಂತಸ..
ಬಂದು ಒಟ್ಟಿಗೆ ಸೇರಿ
ದಿನವ ಕ್ಷಣವಾಗಿಸೊ ಹರುಷ...

ಪ್ರೀತಿಯ ಕರೆಯ ಧ್ಯಾನದಲಿ
ಹಕ್ಕಿಯು ರಾಗ ಹಾಡುತಲಿ
ನಿದ್ದೆಗೆ ಜಾರಿ ಕನಸ ಕಾಣುತಲಿ
ಮಗದೊಂದು ಲೋಕದಿ ಪಯಣಿಸುತಲಿ...

@ಪ್ರೇಮ್@
30.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ