ಮಂಗಳ ನಾದ
ನಿನ್ನ ಹಾಡು ಮಧುರ ಗಾನ
ನಾನೆ ಅದನು ಹಾಡಲು.
ಭಕ್ತಿ ಹಾಡು ಸವಿಯ ಗಾನ
ನನ್ನ ಕಂಠ ಉಲಿಯಲು...//
ಮಾತು ಬೇಡ ಪದವು ಸಾಕು
ನಿನ್ನ ನಾಮ ಹಾಡಲು,
ಕೃತಕ ಬೇಡ ನಿಜವೆ ಸಾಕು
ನಿನ್ನ ಹಾಡಿ ಹೊಗಳಲು..//
ನೀನು ನಿತ್ಯ ನೀನೇ ಸತ್ಯ
ನನ್ನ ಬಾಳು ಬೆಳಗಲು,
ಈಶ ನಿನ್ನ ವರವು ಅಗತ್ಯ
ನಮ್ಮ ಬದುಕು ಕಳೆಯಲು..//
ದೇವ ಎಂದು ಕೂಗಿ ಕರೆಯೆ
ನಿನ್ನ ಕಿವಿಗೆ ಕೇಳಲು,
ಭಕುತರೊಡಲ ಕರೆಯ ದನಿಗೆ
ನಿನ್ನ ಶಕ್ತಿ ತೋರಲು...//
ಭಕ್ತಿ ಭಾವ ಪರವಶದಲಿ
ಭಕ್ತ ನಿನ್ನ ಬೇಡಲು,
ಭವದ ಚಿಂತೆ ತೊರೆಯುವಂತೆ
ನೀನು ವರವ ನೀಡಲು..//
@ಪ್ರೇಮ್@
29.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ