ಮಂಗಳವಾರ, ಏಪ್ರಿಲ್ 9, 2019

905. ಮುದ್ದು

ಮುದ್ದು

ಮುದ್ದು ನೀನು ನನ್ನ ಬಿಟ್ಟು
ಹಾರಿ ಹೋದೆ ಹಕ್ಕಿಯಂತೆ!
ಪೆದ್ದು ನಾನು ಕಾಯುತಿರುವೆ
ಎಂದು ನಿನ್ನ ಸೇರುವೆನೆಂದೆ..//

ಜತೆಗೆ ಬಿಡದೆ ಕಳೆವ ನಮ್ಮ
ರಜೆಯು ದೂರ ಮಾಡಿತು!
ನನ್ನ ಕೆಲಸ ನಿನ್ನ ಸಮಯ
ಬಿಟ್ಟಿರಲು ಬಹಳ ಕಾಡಿತು!!//

ನಿನಗೆ ಖುಷಿಯು ಅಪ್ಪನೊಡನೆ
ನನಗೆ ಇಲ್ಲಿ ತೀರಾ ಏಕಾಂಗಿತನವು,
ತಂಪು ತಳಿರ ಗದ್ದೆ ತೋಟ
ನಿನಗೆ ಆನಂದ ನಿತ್ಯ ಮನವು//

ಮಗುವೆ ನಿನ್ನ ಆಟ ಪಾಠ ನುಡಿಯದು
ಹಗಲು ರಾತ್ರಿ ನನ್ನ ಕಾಡಿ ಬೇಸರವೇ ಬರುವುದು!
ನಿನ್ನ ಅಗಲುವಿಕೆಯು ನನಗೆ
ಸಹಿಲಸಾಧ್ಯವಾದುದು..
ಜೊತೆಯಲಿರೆ ಆನೆಬಲವು ನನ್ನತನವೆ ಮರೆವುದು!//

ಚಿಕ್ಕ ಪುಟ್ಟ ಹಠವು ನಿನ್ನ
ನನ್ನ ಮನದಿ ನೆನಪೆ ಚೆನ್ನ!
ನಿನ್ನ ಜತೆಗೆ ಕಳೆದ ಕ್ಷಣವು
ಚಿನ್ನು ನೀನೆ ನನ್ನ ಜಗವು!//
@ಪ್ರೇಮ್@
09.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ