ಭಾನುವಾರ, ಜನವರಿ 14, 2018

66. ಕವನ- ಬರಹ

ಬರಹ

ಬರೆಯಬೇಕೆಂಬ ಬಹಳ ಭರದಿ

ಬರೆಯುತ್ತಾ ಹೋದೆ ಬಹಳ 

ಬತ್ತದ ಬಾವಿಯು ಬರಗಾಲದಲಾದಂತೆ

ಬರವಣಿಗೆ ಬಸವಳಿಯಿತು 

ಭಾರವಾಯಿತು ಬಳಪ, ಬರಡಾಯಿತು

ಬಿಳಿಯ ಹಾಳೆ ಬಣ್ಣ ಬದಲಿಸದೆ 

ಬೋಳಾದ ಭಾಗ ಹಾಗೇ ಬೀಳಿಸಿ

ಬಿಟ್ಟಿತು ನನ್ನ ಬತ್ತದ ಬುಗಿಲೆದ್ದ ಉತ್ಸಾಹದ ಬುಗ್ಗೆ.

ಬರೆದೆ,ಬರೆದೆ,ಬರೆದೆ, ಎದ್ದು-ಬಿದ್ದು ಬರೆದೆ,

ಬಾಡದೆ, ಬಳುಕದೆ, ಬತ್ತದೆ,ಬಸವಳಿಯದೆ

ಬೆಂಡಾಗದೆ, ಬೆದರದೆ, ಬಿಳಿಹಾಳೆ ನಾನಾಗಿ

ಬಾನಾಡಿ ಬದುಕಂತೆ ಬಾಯಾರದೆ ಬೆಳೆದೆ

ಬರಹದಿ ಹಣೆಬರಹ ಬರೆದೆ, ಬೆಳೆದೆ

ಬರವಣಿಗೆ ಬೆರಗಾಗಿ ಬಂದಿತು ನನ್ನ ಬಳಗವಾಗಿ

ಬರಸೆಳೆದು ನನ್ನ ತಬ್ಬಿ ಬಿಡಲಿಲ್ಲ ಹೊರಗೆ.

ನಾ ಬಂಧಿಯಾದೆ ಬರವಣಿಗೆಯೊಳಗೆ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ