ಬುಧವಾರ, ಜನವರಿ 3, 2018

36. ಲೇಖನ- ಸಾಮಾಜಿಕ ತಾಣಗಳಲ್ಲಿ ಸಾಹಿತ್ಯ ಕೃಷಿ

ಕೃಷಿ ಎಂಬ ಪದವೇ ಅರ್ಥಗರ್ಬಿತ. ಹೊಸತನ್ನು ಪರಿಸರದ ಸಹಾಯದಿಂದ ಬೆಳೆ, ತರು ಎಂಬ ಇಂಗಿತ. ಹೊಸತು ಎಂದ ಕ್ಷಣ ನಮ್ಮ ಮೈ,ಮನಸು ಪುಳಕಗೊಳ್ಳುತ್ತದೆ.ಕಿವಿ ಅರಳುತ್ತದೆ.ಉತ್ಸಾಹದ ಚಿಲುಮೆ ಪುಟಿಯುತ್ತದೆ.
ಸಾಹಿತ್ಯ ಕೃಷಿ ಇದರ ಒಂದು ಅಂಗ.ಬಂದ ಚಿಗುರನ್ನು ಚಿವುಟದೆ,ಸ್ವಲ್ಪ ಮಣ್ಣು,ಸ್ವಲ್ಪ ನೀರು ಹಾಕಿ ಬೆಳೆಯಲು ಸ್ಥಳವಿತ್ತರೆ ಸಾಕು,ಅದು ತಂತಾನೇ ಅಸ್ತಿತ್ವ ಕಂಡುಕೊಳ್ಳುತ್ತದೆ.
ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲೂ ಕವಿಮನಸುಗಳಿವೆ.ಅವು ಒಂಟಿಯಾಗೋ,ಗುಂಪಿನಲ್ಲೋ ಚಿಗುರುಗಳಿಗೆ ನೀರು,ಮಣ್ಣು,ಗೊಬ್ಬರ ಹಾಕಿ ಬೆಳೆಸುತ್ತಿವೆ.ಇದು ಸ್ವಾಗತಾರ್ಹ ಬೆಳವಣಿಗೆ.
  ಮಾಹಿತಿ ತಂತ್ರಜ್ಞಾನ,ಅದರ ಉಪ ಉತ್ಪನ್ನಗಳು ಇಂದಿನ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂಬ ಮಾತು ಇಂದು ಎಲ್ಲೆಡೆ ಕೇಳಿ ಬರುತ್ತಿರುತ್ತಿರುವ ಈ ದಿನಗಳಲ್ಲೇ ಸದ್ದಿಲ್ಲದೆ ಸಾಹಿತ್ಯ ಕೃಷಿ ಬೆಳೆಯುತ್ತಿದೆ ಎನ್ನುವುದಕ್ಕೆ 'ಭಾವದೀಪ್ತಿ' ಕವನ ಸಂಕಲನವೇ ಸಾಕ್ಷಿ.
    ವೈಜ್ಞಾನಿಕ ತಂತ್ರಜ್ಞಾನದ ಬೆಳವಣಿಗೆ,ಅದರ ಮಕ್ಕಳಾದ ವಾಟ್ಸಪ್,ಫೇಸ್ ಬುಕ್ ಇವುಗಳನ್ನು ನಮ್ಮ ಯುವ ಮನಸುಗಳು ಸರಿಯಾಗಿ ಬಳಸಿಕೊಂಡಲ್ಲಿ ಸಾಹಿತ್ಯ ಕೃಷಿ ಮೇರು ಪರ್ವತಕ್ಕೇರುವಲ್ಲಿ ಎರಡು ಮಾತಿಲ್ಲ.ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ