ಪಯಣದೆಡೆಯಲಿ....
ಕಹಿಯ ಮರೆತು,ಸಿಹಿಯ ಮೆಲುಕು ಹಾಕುತ್ತಾ ಜೀವನ ಪಯಣದಲಿ
ನಾ ಸಾಗುತ್ತಿರುವೆ ಮುಂದಕ್ಕೆ//
ಬೇವು-ಬೆಲ್ಲಗಳ ಜೊತೆಯಲಿ ಸವಿಯುತ
ಹೂ -ಹಣ್ಣುಗಳ ಅದರಲಿ ಬೆರೆಸುತ
ನಾ ಸಾಗುತಿರುವೆ ಮುಂದಕ್ಕೆ//
ಅಲ್ಲಲ್ಲಿ ಕಸದ ರಾಶಿ, ಬೇಡವಾದುದ ಹಾಕಿಹರು ಏರಿಸಿ,
ಬೇಸರಿಸುವೆ, ಮಾಲಿನ್ಯ ತಡೆಯಲಾರೆನೆನಿಸಿ,
ನಾ ಸುಮ್ಮನೆ ಸಾಗುತಿರುವೆ ಮುಂದಕ್ಕೆ//
ಮರಗಳ ಕಡಿದು ಮಾರ್ಗವ ಜೋಡಿಸಿ,
ಗಿಡಗಳ ನೆಟ್ಟು,ಧೂಳನು ಹಬ್ಬಿಸಿ,ಅಸಹಾಯಕಿ ಎನಿಸಿ,
ನಾ ಸಾಗುತಿರುವೆ ಮುಂದಕ್ಕೆ//
ಪ್ಲಾಸ್ಟಿಕ್ ಸಾಮಾನು ಎಲ್ಲೆಡೆ ಎಸೆದು,
ಮೈಕಿನ ಮುಂದೆ ಸ್ವಚ್ಛತೆ ಭಾಷಣ ಬಿಗಿದು,
ಆ ಜನರ ನೋಡುತ್ತಾ ನಾ ಸಾಗುತಿರುವೆ ಮುಂದೆ....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ