ಪರಿತಪಿಸುವೆ ನಾ
ಮಾನವನ ಅಟ್ಟಹಾಸವು
ಏರಿದೆ ತುಂತುಂಬಾ/
ಗಿರಿ-ನದಿಗಳ ಬರಿದಾಗಿಸಿ
ಹೆಚ್ಚಾಗಿದೆ ಒಣ ಜಂಭ//
ಲೋಹಕ್ಕೆ ಆಸೆಪಟ್ಟು
ಅಗೆಯುವನು ದುಪ್ಪಟ್ಟು/
ಕಂಪಿಸುತಿಹುದೆನ್ನ ಮೈಕಟ್ಟು
ಕೊನೆಗೆ ಹೋಗುವ ಕಂಗೆಟ್ಟು//
ಪರಿಸರ ಹಾಳುಮಾಡಿ
ಗಿಡಗಳ ನಾಶಮಾಡಿ/
ಪ್ರಾಣಿ-ಪಕ್ಷಿಗಳ ಹೊರದೂಡಿ
ಒಮ್ಮೆ ಹೋಗುವನು ಓಡೋಡಿ//
ತಾನೇ ಮೇಲೆನುತ
ಹಾರಾಡಿ, ಬಡಿದಾಡಿ
ನೆಲ-ಜಲವನೆಲ್ಲ ಹಾಳುಮಾಡಿ
ಮನುಜಗೆ ಬದುಕಲು ಬಿಡಬೇಡಿ//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ