ಮಂಗಳವಾರ, ಜನವರಿ 23, 2018

75. ದಿಯಾಗೆ-ಕವನ

ದಿಯಾ

ಬೆಳಗಿಹವು ಕಂದೀಲ ತುದಿ ತುಂಬಾ ಬೆಳಕು
ಹಿಡಿದು ಸಾಗಿತು ಲಲನೆಯರ ಬಳುಕು/
ಮಾತಿನರಮನೆಯಲ್ಲಿ ದಿಯಾ ಕರಗೋಯ್ತು
ಗೊತ್ತೇ ಆಗ್ಲಿಲ್ಲ ಎಣ್ಣೆ ಮುಗಿದೋಯ್ತು//೧//

ನಮ್ಮ ಮನೆಯ ದೀಪ
ನೀನೇ ನಮ್ಮಯ ರೂಪ
ಬಿಟ್ಟುಬಿಡ ಬೇಕಮ್ಮ ನಿನ್ನ ರಂಪ
ಕಡಿಮೆ ಮಾಡಮ್ಮ ನಿನ ಕೋಪ//೨//

ದೀಪದ ಸಾಲಲ್ಲಿ ಇರಬೇಕು ನೀನು
ತಂಪಾದ ಸ್ಥಳದಲ್ಲಿ ಬೆಳಿಬೇಕು ನೀನು,
ನೀನಿದ್ದೆಡೆ ಜನರಲ್ಲಿ ಹಾಲು-ಜೇನು
ಕಲಿಬೇಕು ನಿನ್ನಿಂದ ಎಲ್ಲರೂನು//೩//

ಒಳ್ಳೆ ಗುಣಗಳ ಕಲಿತು ಬಾಳು ಚಿನ್ನ,
ಕಳ್ಳತನದ ಬದುಕು ಬೇಡವು ರನ್ನ
ಮುದ್ದು ಮಲ್ಲಿಗೆಯ ಗುಣವ ಬೆಳೆಸಿಕೊ ನೀನು
ಎಲ್ಲರೊಡನೊಂದಾಗಿ ಬಾಳು ನೀನು//೪//

ನಮ್ಮನೆಯ ದೀಪ, ಅಂದದ ರೂಪ
ಬೇಡವು ನಿನಗೆ ಸುಳ್ಳಿನ ಕೂಪ
ಇರಲಿ ಎಂದಿಗೂ ದೇವರ ಅನುಗ್ರಹವು
ಎದುರಿಸು ಬರಲು ಕಷ್ಟದ ಪರೀಕ್ಷೆಯು//೫//

ಸುಖ-ಶಾಂತಿ ನೆಮ್ಮದಿಯು
ಇರಲೆಂದೂ ಬದುಕಲ್ಲಿ
ದೇವರ ದಯೆಯೂ ಹಾರೈಸಿ ಬರಲಿ,
ಬದುಕೆಂಬ ಸಾಗರವ ಸುಲಭದಿ ದಾಟಲಿ
ಮಾನವ ಜನುಮ ಸಾರ್ಥಕವಾಗಲಿ//೬//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ