ಶನಿವಾರ, ಜನವರಿ 6, 2018

39. ಭಾವಗೀತೆ-ನೆನಪು

ನೆನಪ ಜೋಳಿಗೆ

ನಾವು ಜೊತೆಗೆ ಕಳೆದ ಗಳಿಗೆ
ನಿತ್ಯ ನೆನಪ ಜೋಳಿಗೆ,
ನಿನ್ನ ಮನದಿ ನನ್ನ ರೂಪ
ಬಾಳು ಭವ್ಯ ಜೀವಿಗೆ//

ಆದರೇನು ಇಂದು ನೀನು
ಇಲ್ಲ ನನ್ನ ಬಾಳಿಗೆ,
ವಿಚ್ಛೇದನ ಏಕೆ ಬಂತೊ
ನಮ್ಮ ಒಳ್ಳೆ ಜೋಡಿಗೆ//

ನಮ್ಮ ಒಲವು ಜೊತೆಗೆ ನಲಿವು
ತನುವು ಮನವು ಬಯಕೆಗೆ,
ಕೋಪ,ಕ್ರೋಧ ಕೈಗೆ ಕೊಟ್ಟೆ
ಕೊಳ್ಳಿ ಇಟ್ಟೆ ಬಾಳಿಗೆ//

ನನಗೆ ನೀನು,ನಿನಗೆ ನಾನು
ಒಲುಮೆಯಿತ್ತು ಮನಸಿಗೆ,
ಜಾರಿ ಬಿದ್ದು ಅಲ್ಲೆ ಇದ್ದು,
ಒಂಟಿತನವು ಬದುಕಿಗೆ//

@ಪ್ರೇಮ್@

ನೆನಪ ಜೋಳಿಗೆ
(ನಲಿವು ಶೀರ್ಷಿಕೆಗೆ)

ನಾವು ಜೊತೆಗೆ ಕಳೆದ ಗಳಿಗೆ
ನಿತ್ಯ ನೆನಪ ಜೋಳಿಗೆ,
ನಿನ್ನ ಮನದಿ ನನ್ನ ರೂಪ
ಬಾಳು ಭವ್ಯ ದೀವಿಗೆ//

ಆದರೇನು ಇಂದು ನೀನು
ಇಲ್ಲ ನನ್ನ ಬಾಳಿಗೆ,
ವಿಚ್ಛೇದನ ಏಕೆ ಬಂತೊ
ನಮ್ಮ ಒಳ್ಳೆ ಜೋಡಿಗೆ//

ನಮ್ಮ ಒಲವು ಜೊತೆಗೆ ನಲಿವು
ತನುವು ಮನವು ಬಯಕೆಗೆ,
ಕೋಪ,ಕ್ರೋಧ ಕೈಗೆ ಕೊಟ್ಟೆ
ಕೊಳ್ಳಿ ಇಟ್ಟೆ ಬಾಳಿಗೆ//

ನನಗೆ ನೀನು,ನಿನಗೆ ನಾನು
ಒಲುಮೆಯಿತ್ತು ಮನಸಿಗೆ,
ಜಾರಿ ಬಿದ್ದು ಅಲ್ಲೆ ಇದ್ದು,
ಒಂಟಿತನವು ಬದುಕಿಗೆ//

ಬದುಕಬಲ್ಲೆ ನೆನಪನಿಟ್ಟು
ನೀ ಕಲಿಸಿದ ದಾರಿಗೆ,
ಗುರು ಹಿರಿಯರ ರಕ್ಷೆಯಿಹುದು
ಸಮಾಜ ಸೇವೆ ಗೆಲುವಿಗೆ//

@ಪ್ರೇಮ್@
5.1.18

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ