ಬುಧವಾರ, ಜನವರಿ 3, 2018

20.ಸೌಂದರ್ಯ

ಧರಣಿಯ ಧಿರಿಸು (ಸೌಂದರ್ಯ)

ಪಶು-ಪಕ್ಷಿ ದನಿಯೆತ್ತಿ ಕೂಗಿಹವು
ಮಂಡೂಕ ನುಡಿ ಮಾರ್ದನಿಸಿಹವು
ಜುಳು-ಜುಳು ನೀರ ನಿನಾದವು
ಝರಿಗೆ ಎತ್ತರದಿ ನೀರ ಹರಿವು//

ಸಾಲು ಮರಗಳು ನದಿಯ ಬದಿಗಳಲಿ
ಶೀರ್ಷಾಸನ ಮಾಡಿಹವು ನದಿ ನೀರಿನಲಿ
ದಟ್ಟ ಹಸಿರು ಬಣ್ಣ ಪ್ರಜ್ವಲಿಸುತಲಿ
ಜಲಧಾರೆ ತುಂಬಿದೆ ಇಳೆಯ ಬಿಂಬಿಸುತಲಿ//

ಕಾನನ ಕಡಲು ಬಾಗಿಹುದು ಕಡೆಗೆ
ಭುವಿ-ನೀರ ಸಂಗಮ ದಿಗಂತದೆಡೆಗೆ
ಮರದ ತುದಿ ನದಿ ನೀರ ಒಳಗೊಳಗೆ
ದೇವರೇ ಕಾಣುತಿಹ ನೀರಿನೊರತೆಯೊಳಗೆ//

ಧರಣಿ ದೇವಿ ಸೌಂದರ್ಯ ವರ್ಣಿಸಲಸದಳ
ನೀರಿಂದ ತುಂಬಿಹುದು ನದಿ,ಕೆರೆ,ಹಳ್ಳ
ಬಿಂಬಿಸಿ,ಪ್ರತಿಫಲಿಸಿ ಗಿಡ ಮರ ಬಳ್ಳಿ,
ಆ ಶೃಂಗಾರ ನೋಟ ನಾ ಹೇಗೆ ವರ್ಣಿಸಲಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ