ಶುಕ್ರವಾರ, ಜನವರಿ 26, 2018

87. ಪ್ರೇಮ ಗೀತೆ

1. ನಾನು-ನೀನು

ನಾನು ನೀನು ಇಂದೂ ಎಂದೂ
ಒಂದೆ ಎಂಬಂತಾಗಿದೆ,
ನನ್ನ ಮನವು ನಿನ್ನ ಮನವು
ಒಲವ ಹಾಡ ಹಾಡಿದೆ//

ನೀನು ಇರದೆ ನಾನು ಇಲ್ಲ
ಎಂಬ ಭಾವ ಮೂಡಿದೆ,
ನಿನ್ನ ನಾನು ನನ್ನ ನೀನು
ಒಲಿದು ಒಂದಾಗಿ ಆಗಿದೆ//

ನನ್ನ ಎದೆಯ ಪೊಟರೆಯಲ್ಲಿ
ನೀನು ಗೂಡು ಕಟ್ಟಿದೆ,
ನನ್ನ ಬಾಳ ಪಯಣದಲ್ಲಿ
ನೀನು ಜೊತೆಗೆ ಸೇರಿದೆ//

ನನ್ನ ಹಾಡ ಪಲ್ಲವಿಗೆ
ನೀನು ದನಿಯ ನೀಡಿದೆ,
ನನ್ನ ಬದುಕ  ಹೆಜ್ಜೆ ಮೇಲೆ
ನಿನ್ನ ಬಾಳು ಇರಿಸಿದೆ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ