ಜೈ ಜವಾನ್
ಸೇನೆಯಲ್ಲಿ ಕೆಲಸ ಮಾಡಿ ಕೆಲವಾರು ವರ್ಷಗಳ ಬಳಿಕ ನಿವೃತ್ತಿ ಪಡೆದು ಬಂದು ಶಿಕ್ಷಕರಾಗಿ ಕೆಲಸ ಮಾಡುತ್ತಿರುವ, ರೈತರಾಗಿರುವವರನ್ನು ಹಾಗೂ ಪೊಲೀಸ್ ಇಲಾಖೆಯಲ್ಲಿ ಇರುವ ಹಲವಾರು ಜನರನ್ನು ಸಂಧಿಸಿದ್ದೇನೆ. ಅವರ ಅನುಭವಗಳನ್ನು ಕೇಳಿ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೇನೆ ಅವರ ಕಷ್ಟಗಳನ್ನು! ಸೇನೆಯಲ್ಲೂ ಕೆಲಸಗಳಲ್ಲಿ ಮೇಲ್ಮಟ್ಟದ ಹಾಗೂ ಕೆಲಮಟ್ಟದ ಕೆಲಸಗಳಿವೆ, ಎಲ್ಲರೂ ಗಡಿ ಕಾಯುವವರೇ ಅಲ್ಲ, ಗನ್ಮೆನ್, ಆಪರೇಟರ್, ಆಫೀಸರ್, ಕಮಾಂಡೆಂಟ್, ಹೆಡ್,ಕುಕ್,ಡಾಕ್ಟರ್,ನರ್ಸ್, ಇಂಜಿನಿಯರ್ ಹೀಗೆ ಹಲವಾರು ಕೆಲಸಗಳ ಅವಕಾಶ ಇಲ್ಲಿರುವುದರಿಂದ ಮಹಿಳೆಯರಿಗೂ ದುಡಿಯಲು ಅವಕಾಶ ಇದೆ.
ಸೇನೆಯಲ್ಲಿ ಗಡಿ ಕಾಯುವ ಸೇನಾನಿಗಳಿಗೆ ಸಮಯದ ಹಂಗಿಲ್ಲ,ರಾತ್ರಿ ಹಗಲೆಂಬುದಿಲ್ಲ, ನಿದ್ದೆ,ಊಟಕ್ಕೂ ಸಮಯಕ್ಕಾಗಿ ಕಾಯಲಿಕ್ಕಾಗುವುದಿಲ್ಲ! ಹಲವಾರು ಬಾರಿ ಊಟವನ್ನು ಎಲ್ಲೋ, ಯಾರಿಗೂ ತಿಳಿಯದಂತೆ ಹುದುಗಿಸಿ ಇಡಬೇಕು ಮಣ್ಣಿನ ಅಡಿಯಲ್ಲಿ!
ಒಂದುವೇಳೆ ಅದು ಅಲ್ಲೇ ಬಾಕಿಯಾಗಿ ಮುಂದೆ ಸಾಗಿದರೆ ಆ ಹೊತ್ತಿನ ಊಟ ಇಲ್ಲ. ಬಂಕರ್ ಗಳೇನಾದರೂ ಹಾಳಾಗಿ ರಿಪೇರಿಗೆ ಬಂದರೆ ಅದನ್ನು ಸರಿಮಾಡುವವರಿಗೆ ಆಪರೇಷನ್ ಥಿಯೇಟರ್ ಒಳಗೆ ಹೊಕ್ಕಂತೆ!
ಅರೆಕಾಲಿಕ ಪಡೆ,ಗಡಿ ಭದ್ರತಾ ಪಡೆಯವರ ಕಷ್ಟಗಳೂ ನೂರಾರು. ಸೇನಾ ನಾಯಕನ ಆಜ್ಞೆ ಪಾಲಿಸಲೇ ಬೇಕು. ಟ್ರೈನಿಂಗ್ ಕೂಡಾ ತುಂಬಾ ಕಷ್ಟ. ಎಷ್ಟೋ ಜನ ಟ್ರೈನಿಂಗ್ ಅರ್ಧದಲ್ಲೇ ಬಿಟ್ಟು ಓಡಿ ಹೋದವರಿದ್ದಾರೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸೈನಿಕರು ಸದೃಢರಾಗಿದ್ದರೆ ಮಾತ್ರ ಸಾಧ್ಯ.
ಕೊರೆಯುವ ಹಿಮ,ಮಡುಗಟ್ಟುವ ಚಳಿಯಲ್ಲಿ ಐಸ್ ನೀರ ಸ್ನಾನ! ಬೆನ್ನಲ್ಲಿ ಭಾರ, ಕೈಯಲ್ಲಿ ಕೋವಿ! ಕೊಟ್ಟ ಊಟ! ಸಂಸಾರ ಎಲ್ಲೋ. ದೇಶವೇ ಮನೆ, ನೆಲವೇ ಹಾಸಿಗೆ,ಆಕಾಶವೇ ಹೊದಿಕೆ! ಶಿಸ್ತು ಪಾಲನೆ! ಹಿರಿಯರ ಆಜ್ಞಾಧಾರಿ!
ಒಟ್ಟಿನಲ್ಲಿ ತನ್ನ ಪೂರ್ತಿ ಜೀವನ ದೇಶದ ರಕ್ಷಣೆ,ಜನರ ರಕ್ಷಣೆಗಾಗಿ ಮೀಸಲು! ಇಂಥ ಮಹಾನ್ ಯೋಧರಿಗಾಗಿಯೇ ಇರುವ ಲಾಲ್ ಬಹಾದ್ದೂರರ ಘೋಷಣೆ "ಜೈ ಕಿಸಾನ್".
@ಪ್ರೇಮ್@
ಬುಧವಾರ, ಜನವರಿ 31, 2018
76. ಲೇಖನ-ಜೈ ಜವಾನ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ