ಮಂಗಳವಾರ, ಜನವರಿ 2, 2018

18. ಭಾವಗೀತೆ- 1 ನೆನಪು

1.ಭಾವಗೀತೆ (ನೆನಪು)

*ಗೆಳೆಯಾ...*
ಹಚ್ಚ ಹಸುರಿನ ದಟ್ಟ ಕಾನನದ
ನಡುವೆ ಕೊರೆದು ನಿರ್ಮಿಸಿದ
ರಸ್ತೆಯೊಳು ಬಸ್ಸಿನಲಿ ಕುಳಿತಿದ್ದೆ
ನಿನ್ನೊಡನೆ ಕನಸು ಪೋಣಿಸುತಿದ್ದೆ//

ಒಂದಲ್ಲ ಒಂದು ಉತ್ತಮ ದಿನ
ನಾವಿಬ್ಬರೆ ಓಡಾಡಬೇಕು ಅನುದಿನ
ನೆನಪುಕ್ಕಿಸಬೇಕು ತನುಮನ
ನವಿರೇಳುವಂತೆ ದೇಹದ ಕಣಕಣ//

ನಿನ್ನೊಲುಮೆಯ ಪಡೆವ ಕಾತರ
ನಿನ್ನ ಪ್ರೀತಿಗೆ ಮೈಮನದಾತುರ
ನೀ ಬಾಳಲಿ ಬರುವ ಕನಸು ನಿರಂತರ
ನಿನ್ನೊಡನೆ ಕಳೆದ ಕ್ಷಣ ಅಜರಾಮರ//

ನೆನಪ ಮೂಟೆಯ ಬಿಚ್ಚಲು ಇಷ್ಟ
ನೀ ಬರದಿರೆ ಬಾಳು ಸಂಕಷ್ಟ
ನನ್ನೊಂದಿಗೆ ಕಾದಿದೆ ಆ ಸುಂದರ ಬೆಟ್ಟ!
ನೀ ಬಂದರೆ ಬಾಳಲಿ ನನಗಿಲ್ಲವು ಕಷ್ಟ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ