ಗುರುವಾರ, ಜನವರಿ 18, 2018

68. ಭಾವಗೀತೆ-ನನ್ನ ಮನ ನೀ

ನನ್ನ ಮನ

ನನ್ನ ಹೃದಯ ಕಂಪನ
ನಿನ್ನ ಮನದ ಸಿಂಚನ/
ನಾನು ನೀನು ಒಂದಾದರೆ
ಅದುವೆ ನಮ್ಮ ಜೀವನ//

ಹೂವಿನ ಜೊತೆ ದಾರದಂತೆ
ನನ್ನ ನಿನ್ನ ಗೆಳೆತನ/
ನನ್ನದೇನು ನಿನ್ನದೇನು
ಒಂದಾಗಿದೆ ತನುಮನ//

ನಾನು ನೀನು ಈಗ ಏನು
ಎಲ್ಲ ನಾವು ಇಬ್ಬರೆ/
ನಿನ್ನ ಉಸಿರು ನನ್ನ ಹೆಸರು
ಹಾಲು-ಜೇನು ನೀ ಸಿಕ್ಕರೆ//

ನನ್ನ ಬದುಕು ಹೂವಿನಂತೆ
ಪತಂಗ ನೀನು ಅದರಲಿ/
ಮಧುವ ಹೀರು, ಕಾಯಿ ಮಾಡಿ
ಹಣ್ಣಾಗಿಸು ಬದುಕಲಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ