ಬುಧವಾರ, ಜನವರಿ 3, 2018

21. ಜೀವಸಿರಿ

ನಾಯಿಮರಿ ಪಾಡು
(ಜೀವ ಶೀರ್ಷಿಕೆಗೆ)

ಆ ಮರಿಯ ಪಾಡು ಏಕೆ ಕೇಳುವಿರಿ
ಅದ ತಂದು ರಸ್ತೆಯಲಿ ಇರಿಸಿರುವಿರಿ//

ಅಲ್ಲಿತ್ತೊಂದು ಬೆಳೆದ ನಾಯಿ
ಕಂಡಿತದಕೆ ಅದುವೆ ತನ್ನ ತಾಯಿ
ಸಾರಿತದರ ಬಳಿ,ಅಲ್ಲಾಡಿಸುತ ಬಾಲ,
ಆ ಗಂಡು ನಾಯಿಗೆ ಸಿಟ್ಟು ಬಂತು ಬಹಳ//

"ತೋರು ದಯೆ ನೀ ನನ್ನ ಜೀವ"
ಎಂಬಂತಿತ್ತು ಆ ಮರಿಯ ಭಾವ!
ತಾಯಿಗೆ ಮಾತ್ರ ಮಗುವು ಜೀವ
ತಾಯಿಲ್ಲದಿರೆ ಕರೆದ ದೇವ ಕಾವ//

ಕನಿಕರವೆ ಇಲ್ಲ ಮಾನವ ಜೀವಿಗೆ
ಬೆಲೆಯೇ ಇಲ್ಲ ಕಿರು ಪ್ರಾಣಿಗೆ,
ಸಾವಿರಾರು ಕೋಳಿ ಆಹಾರ ಜನಕೆ,
ಕುರಿಯೂ ಅಲ್ಲ ಲೆಕ್ಕ ಇವಕೆ//

ನಾಯಿ ಮರಿಯಳಲು ಕೇಳೋರ್ಯಾರು?
ಬಂದೇ ಬಂತು ಬೈಕು ಜೋರು,
ಅಡ್ಡ ಬಂತು ಪುಟಾಣಿ ಮರಿ
ಕೊನೆಯಾಯಿತದರ ಜೀವ ಸಿರಿ!//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ