ಸೋಮವಾರ, ಜನವರಿ 29, 2018

94. ಲೇಖನ -ದೇವರು

ದೇವರೆಂದರೆ ಕನ್ಫ್ಯೂಶನ್
   ಹಲವಾರು ದೇವರುಗಳು, ಸಾವಿರಾರು ದೇವಸ್ಥಾನಗಳು. ಯಾವ ದೇವರು ಗ್ರೇಟ್, ಯಾರನ್ನು ಹೆಚ್ಚು ಬೇಡಿಕೊಳ್ಳಬೇಕು,ಯಾವ ದಿನ ಯಾವ ದೇವರನ್ನು ಪೂಜಿಸಬೇಕು ಇತ್ಯಾದಿ ಕನ್ಫ್ಯೂಶನ್ ಗಳು.
   ಇದಲ್ಲದೇ ಗ್ರಹಗಳಲ್ಲಿ ನವಗ್ರಹ ಪೂಜೆ ಯಾವ ಗ್ರಹಕ್ಕೆ ಯಾವಾಗ ಸಲ್ಲಬೇಕು, ಯಾವ ಗ್ರಹಕ್ಕೆ ಯಾರು ಅಧಿಪತಿ, ಯಾವ ಗ್ರಹಕ್ಕೆ ಮೊದಲ ಪೂಜೆ, ಯಾವ ಗ್ರಹದ ದೋಷ ಹೆಚ್ಚು ಇದೆಲ್ಲ ಆಯೋಮಯ.
   ನಾಸ್ತಿಕತೆ ಸಾಧ್ಯವಿಲ್ಲ, ಕೆಲವೊಂದು ಪವಾಡ ನೋಡುವಾಗ ದೇವರಿದ್ದಾನೆ ಎಂದೆನಿಸುವುದು ಸಹಜ. ವಿಜ್ಞಾನಕ್ಕೆ ನಿಲುಕದ ಅದೆಷ್ಟೋ ವಿಚಾರಗಳು ದೇವತಾ ಪ್ರಾರ್ಥನೆಯಿಂದ ಸರಿಯಾದ ಘಟನೆಗಳಿವೆ. ಮಾನವನ ನಂಬಿಕೆ ತಳವೂರಿದೆ.
  ಕೆಲ ಮಹಾಕಾಳೀ ಪೂಜಾರಿಗಳು ತನ್ನ ಕೆಲಸ ಪೂರೈಸಲು ಕಾಳೀ ಮಾತೆಗೆ ಬಲಿ ಕೊಟ್ಟು ಸಮಯ ಕೊಡುತ್ತಾರೆ, ದೈವಾರಾಧಕರು ದೈವಕ್ಕೆ ಕೋಲ ಕೊಟ್ಟು, ಬಲಿ ಕೊಟ್ಟು, ಪೂಜೆ ಮಾಡಿ ತನಗೆ ಹೀಗೆ ಆಗಬೇಕೆಂದು ಬೇಡಿಕೊಳ್ಳುತ್ತಾರೆ. ನಾನಿನಗೆ ಇಂಥ ಪೂಜೆ ಕೊಡುವೆ,ನನ್ನ ಈ ಕೆಲಸ ನೆರವೇರಬೇಕೆಂದು ನಾವು ಕೇಳಿಕೊಂಡು, ಅದು ಈಡೇರಿ ಹೇಳಿದ ಮಾತು ತಪ್ಪಿದರೆ ಮತ್ತೆ ಶಿಕ್ಷೆಯೇ? ಹಾಗಾದರೆ ದೇವರು ನಮ್ಮಿಂದ ಎಕ್ಸ್ಪೆಕ್ಟ್ ಮಾಡ್ತಾರೆಯೇ? ದೇವನಿಗೆ ಧನಕನಕ ಬೇಕೇ?
  ಸಿರಿವಂತನಿಗೆ ಎದುರು ಕುಳ್ಳಿರಿಸಿ ಪೂಜೆಯೇ? ಬೇಸರವೆನಿಸುತ್ತದೆ!ದೇವರಿಗೂ ಮೇಲು-ಕೀಳಿದೆಯೇ? ದೇವರಿಗೆ ಶಕ್ತಿ ಕೊಡಲು ದೈವಗಳು ಬೇಕೆ? ಕೆಲವು ದೇವರು ಸಸ್ಯಾಹಾರಿಗಳಾದರೆ ಇನ್ನು ಕೆಲವರಿಗೆ ರಕ್ತಾಹಾರ ಬೇಕು!
ಒಟ್ಟಿನಲ್ಲಿ 1001 ದೇವರು,ದೈವಗಳು,ಹೆಸರುಗಳು .. ಕನ್ಫ್ಯೂಶನ್ನೋ ಕನ್ಫ್ಯೂಶನ್!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ