ನೀನಿಲ್ಲದ ಕ್ಷಣ
ನೀನಿಲ್ಲದ ಕ್ಷಣವದು ಬೇಸರವೇ ಬರುವುದು
ಮನದ ಮೂಲೆಯಿಂದ ಎಲ್ಲ ನರಗಳಳುವುದು...
ಬೆಟ್ಟದಿಂದ ಬಾಗಿ ಬಿದ್ದ ಮರದ ಹಾಗೆ ಮನವಿದೆ,
ಪುಟ್ಟ ಕಂದ ತಾಯ ಕಳೆದು ಅಳುವಂತೆ ಅನಿಸಿದೆ...
ಸಂಜೆ ಸೂರ್ಯ ಮುಳುಗಿದಾಗ ಭುವಿಯಂತೆ ಮನ ಕತ್ತಲಾಗಿದೆ,
ಮಂಜು ಬಿದ್ದ ಗಿಡದ ಎಲೆಯು ಕಾಣದಂತೆ ತನು ಮುಸುಕಿದೆ...
ನನ್ನ ಮನದ ದೀಪವಾರಿ ಬೆಳಕು ಮಾಯವಾಗಿದೆ
ತನ್ನತನವೆ ಮರೆತು ಹೋಗಿ ನಿನ್ನ ನೆನಪೆ ಕಾಡಿದೆ...
ರಾಜನಿರದ ರಾಣಿಯಂತೆ ಮನವು ತಣಿದು ದಣಿದಿದೆ
ಸೂಜಿಯಿಂದ ದೂರವಾದ ದಾರದಂತೆ ಮರುಗಿದೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ