ಮಂಗಳವಾರ, ಜನವರಿ 23, 2018

71. ಕವನ--ಕಂದನ ಹೆಜ್ಜೆ

ಕಂದನ ಹೆಜ್ಜೆ
ಪುಟ್ಟ ಪುಟ್ಟ ಹೆಜ್ಜೆ ಇಡುತ
ನಮ್ಮ ಪುಟ್ಟ ಬಂದ,
ದಿಟ್ಟತನದಿ ಮಾತನಾಡಿ
ನಡೆವ ರೀತಿ ಚಂದ//

ತಂಟೆ ಮಾಡಿ ಪೆಟ್ಟುತಿಂದು
ತುಂಟ ಜಗಳ ಕಾದ,
ನೆಂಟರೆಲ್ಲರನ್ನು ನಗಿಸಿ
ಪುಟ್ಟ ಹೀರೊ ಆದ//

ಪುಟ್ಟ ಹೆಜ್ಜೆ ಏನು ಅಂದ
ಕಿಂಕಿಣಿ ನಿನಾದ
ದಟ್ಟ ಗುಂಗುರು ಕೂದಲನ್ನು
ಹಿಡಿದು ಜೋರು ಎಳೆದ//

ಒಮ್ಮೆ ಕೋಪ ಮತ್ತೆ ತಾಪ
ಮಕ್ಕಳಾಟವೆ ನಮಗೆ ಅಂದ,
ಕೇಕೆ,ಕಲರವ,ಮೌನ
ಮನೆಯು ಸದಾ ಆನಂದ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ