ಮಂಗಳವಾರ, ಜನವರಿ 30, 2018

81. ಭಾವಗೀತೆ-ಸೀತೆ ಕಾಣದಾದಾಗ ರಾಮನ ಭಾವ

ನನ್ನೊಲವೆ

ನನ್ನೊಲುಮೆಯ ಬಳುಕುವ ಲತೆ
ನನ್ನೊಡಲ ಪ್ರಿಯೆ ಸೀತೆ,
ನಿನ್ನ ಕಾಣದೆ ಪರಿತಪಿಸಿಹೆ ನಾ
ನಿನ್ನ ಕಾಣದೆ ಬಳಲಿ ಬೆಂಡಾದೆ ನಾ//

ನನ್ನೊಡಲ ಮರಿ ದುಂಬಿ ನೀ,
ನನ್ನುಸಿರ ಹಸಿರ ಸಿರಿ ನೀ,
ನೀನಿಲ್ಲದ ನಾನು ಒಂಟಿಯಾಗಿರುವೆ!
ನನ್ನ ಬಿಟ್ಟು ಎಲ್ಲಿ ಹೋಗಿರುವೆ?//

ಕಣ್ಣುಗಳು ಕಾದಿಹವು ನಿನ್ನ ಕಾಣಲು,
ಕರಗಳು ಬೇಡುತಿಹವು ನಿನ್ನಾಲಂಗಿಸಲು,
ನನ್ನರಸಿ ನೀ ಎಲ್ಲೆರುವೆ
ನಿನಗಾಗಿ ಮನದರಸಿ ಕಾಯುತಿರುವೆ//

ನಿನಗಾಗಿ ಮನದಿ ಹಂಬಲಿಸುತಲಿ,
ಬಚ್ಚಿಟ್ಟ ಭಾವಗಳ ಸಂತೈಸುತಲಿ,
ನಿನ್ನ ಕರೆಗಾಗಿ ಹಾತೊರೆಯುತಲಿ.
ಬಳಲಿ ಬೆಂಡಾಗಿಹೆನು ನಾನಿಲ್ಲಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ