ಭಾನುವಾರ, ಜನವರಿ 14, 2018

67. ಕವನ- ಸ್ವಗತ

ಸ್ಪರ್ಧೆಗೆ ಭಾವಗೀತೆ

ಸ್ವಗತ

ಓ ನನ್ನ ಮುದ್ದು ಗುಲಾಬಿ..
ಓ ನನ್ನ ಕೆಂಪು ಗುಲಾಬಿ...
ನೀ ಎಂದೂ ನಗುತಿರು ಹೀಗೇ..
ಹುಣ್ಣಿಮೆಯ ಚಂದಿರನ ಹಾಗೇ../ಪ/

ನೀ ಬರಲು ನಾನು, ಹಾಲಲ್ಲಿ ಜೇನು
ಬೆರೆಸಿ ಸವಿದಂತೆ ಜಾನು....
ಮುಸ್ಸಂಜೆ ಹೊತ್ತಲ್ಲಿ, ತಂಗಾಳಿ ಸುಳಿದಾಗ
ಅನಿಸುತ್ತೆ ನೀ ಬಂದೆಯೇನೋ../೧/

ನೀ ಜೊತೆಗಿರೆ ಉತ್ಸಾಹ...
ನೀ ನಗುತಿರೆ ಉಲ್ಲಾಸ..
ನಾವಿಬ್ಬರು ಜೊತೆಗದ್ದರೆ ಸಂತೋಷವು..
ನೀ ಬರಲು ಮನಕೆ ಆನಂದವು/೨/

ನಿನ್ನ ದಾರಿಯ ಕಾಯುವೆನು
ಈ ಗುಲಾಬಿ ಜತೆಗಿರುವೆನು...
ಇಬ್ಬರೂ ಬಾಡುವ ಮೊದಲು ಬಾ ಬಾ ನೀನು..
ಕಾಯುತಿಹೆ ನಿನ್ನ ಸೇವಕ ಎಂದೂ ನಾನು/೩/
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ