ಬುಧವಾರ, ಏಪ್ರಿಲ್ 3, 2019

3. ವಿಮರ್ಶೆಗಳು

[3/20, 11:52 AM] Wr Siraj Ahmed Soraba: ***ಪ್ರೇಂ ಸಹೋದರಿ***

ಪ್ರಕೃತಿಯ ಕಾಳಜಿ ಹೊತ್ತ ಗಜಲ್ ಪ್ರಸ್ತುತ ಸನ್ನಿವೇಶದಲ್ಲಿ
ಸೊಗಸಾಗಿ ಮೂಡಿ ಬಂದಿದೆ.
ನರರ ವಿಕೃತಿಗಳಿಂದ ಬೇಸತ್ತ
ಭೂಮಿತಾಯಿ ಮಾನವಕುಲವನ್ನು ಎಚ್ಚರಿಸುತಿದೆ ನನ್ನ ಒಲುಮೆಯಿಲ್ಲದೆ ನಿಮ್ಮ ಉಳಿವಿಲ್ಲವೆಂದು ಬುದ್ಧಿ ಹೇಳುವ ಗಜಲ್ ಇಷ್ಟವಾಯಿತು
ಹಾಗೆಯೇ ನಾನು ಯಾವಾಗಲೂ ಹೇಳುವುದು
ಸಾಲುಗಳ ತೂಕದ ಬಗ್ಗೆ
ಎಲ್ಲಾ ಚರಣಗಳು ಸಮತೋಲಿತವಾಗಿದ್ದರೆ ಗಜಲ್
ಇನ್ನೂ ಸೊಗಸಾಗಿರುತ್ತದೆ.

ಹೃತ್ಪೂರ್ವಕ ಅಭಿನಂದನೆಗಳೊಂದಿಗೆ
***ಯು ಸಿರಾಜ್ ಅಹಮದ್ ಸೊರಬ***
[3/21, 1:09 PM] Wr 100 Ahmd: ಪ್ರೇಮ್ ಗುರುಗಳೆ🙏

ಹುಟ್ಟು ಸಾವಿನ ಮದ್ಯ ಎಲ್ಲವೂ ಅನಿರೀಕ್ಷಿತ ಎನ್ನುತ್ತಾ ಮನಮಿಡಿಯುವ ಭಾವ ಲಹರಿಯನ್ನು ಹರಿ ಬಿಟ್ಟಿರುವ ಪರಿಗೆ ಮನಸೋತಿದೆ ನಿಮ್ಮ ಸಾಹಿತ್ಯದಲ್ಲಿ ಸದಾ ಸಾಮಾಜಿಕ ಕಾಳಜಿ ವಹಿಸುವುದು ಮೊತ್ತೊಬ್ಬರಿಗೆ ಸಹಾಯ ಮಾಡುವ ಗುಣ ಅಡಗಿಸಿ ಬಂದಂತೆ ಬರಲಿ ಹೋದಂತೆ ಹೋಗಲಿ ದುಡಿದ್ದಿದ್ದು ತಿನ್ನೋವನೆ ಮನುಜ ಎಂಬ ನುಡಿಗಳು ಸಾರಾಸಗಟಾಗಿ ನೆನಪಿಗೆ ಬರುತ್ತವೆ ಇಲ್ಲವಾದರೆ ನರಕದ ಗಂಟು ಬೆನ್ನಿಗೆ ಬೀಳುವುದು ಉಂಟು ಎನ್ನುತ್ತಾಳೆ ಮಾನವೀಯತೆಯನ್ನು ಬಿತ್ತುವ ಗಝಲ್ ಸೊಗಸಾಗಿದೆ ಕೆಲವು ಕಡೆ ಅಕ್ಷರ ದೋಷಗಳು ಕಂಡಿವೆ ಗಮನಿಸಿ ನೋಡಿ ನನಗೆ ಅನಿಸಿದ್ದನ್ನು ಹೇಳಿರುವೆ ತಪ್ಪು ತಿಳಿಯಬೇಡಿ... ತಮಗೆ ಅಭಿನಂದನೆಗಳು 🙏🙏🙏🙏🙏
[3/25, 2:07 PM] Wr BBK Thavur: ಪ್ರೇಮ್ ರವರ ಗಝಲ್ ಚೆನ್ನಾಗಿದೆ. ಮಳೆರಾಯನಿಗಾಗಿ ಕಾತರಿಸುವ ಪರಿ ಚೆನ್ನಾಗಿದೆ
[3/26, 7:18 PM] Wr Thaggihalli Ravi: *ಗಝಲ್-೨೨*

*ಕನಸಿನ ತೋಟದಿಂದ ಹೊರಗೆ ಬಾರೋ ಜಾನು..*
*ಮನಸಿನ ಮೂಟೆಯೊಳ ಸೇರೋ ಜಾನು..*

ಎನ್ನುತಾ

*ತಂತ್ರಜ್ಞಾನದಂತೆ ವೇಗವಾಗಿ ನನ್ನೊಳಗೆ ಪಸರಿಸೋ ಜೀವವೆ,*
*ಸಂತ್ರಸ್ಥಳಾಗದಂತೆ ಪ್ರೀತಿಯಲಿ ಪ್ರೇಮನೊಡನಿರಬಾರೋ ಜಾನು...*

ಅಂದು ನಿರಾಳವಾಗಿ ಅನುಭವಿಸುವ ಪ್ರೇಮವೂ ಹೇಗೆ ಯಾಂತ್ರಿಕ ಚೌಕಟ್ಟಿನ ಬಂಧಿಯಾಗುವ ಭಯವೂ ಚೆನ್ನಾಗಿ ಬಿಂಬಿತವಾಗಿದೆ.

*ಅಭಿನಂದನೆಗಳು ಪ್ರೇಮಾ ಮೇಡಂ*

ತಗ್ಗೀಹಳ್ಳಿ ರವಿಕುಮಾರ
[3/27, 5:17 PM] Wr Sudha Telkar Mam: ಮೆಚ್ಚುಗೆಯ ನುಡಿಗಳಿಗೆ ಮನದಾಳದ ಧನ್ಯವಾದಗಳು ಪ್ರೇಮ್. ನಿನ್ನ ಸುಂದರ ಗಝಲ್ ವಾಸ್ತವ ಬಿಂಬಿಸಿದೆ . ಅಭಿನಂದನೆಗಳು.🙏🙏🌹🌹😊
[3/28, 12:09 PM] Wr Champu: ಪ್ರೇಮ ಸರ್ ಅವರ ಗಜ಼ಲ್ ಮೊದಲ ಸಾಲಿನಲ್ಲಿಯೇ ಗೆದ್ದುಬಿಗುತ್ತಿದೆ...ಅದ್ಭುತ ರಚನೆ👏👏👏👏👏👏
[3/29, 1:52 PM] Wr Manu Vaidya: *ಪ್ರೇಮಕ್ಕಾ ನಮಸ್ತೆ*

ಅಂಬರದ ಮಹತ್ವವನ್ನು ರೂಪಕ ಉಪಮೆಗಳ ಮೂಲಕ, ಭಾವಪೂರ್ಣವಾಗಿ ಬರೆದ ಗಜಲ್ ತುಂಬಾ ಸುಂದರವಾಗಿದೆ...

ಅಂಬರದಲ್ಲಿನ ವಿಸ್ಮಯವು ಅದೆಷ್ಟೋ ಇದೆ.. ಮಾನವನಿಗೆ ಇಂದಿಗೂ ಕಂಡುಹಿಡಿಯಲಾಗದ ರಹಸ್ಯಗಳು ಅಂಬರದಲ್ಲಿವೆ.. ಅಂತಹ ಆಕಾಶದ ವರ್ಣನೆ ನಿಮ್ಮ ಗಜಲ್ ನಲ್ಲಿ ಬಹಳ ಸೊಗಸಾಗಿ ಮೂಡಿ ಬಂದಿದೆ..

ಇನ್ನು ನಿಮ್ಮ ಗಜಲ್ ಬಗ್ಗೆ ಹೇಳಬೇಕೆಂದರೆ,

👉🏻ಗಜಲ್ ಭಾವಪೂರ್ಣವಾಗಿ ಸೊಗಸಾಗಿ ಮೂಡಿಬಂದಿದೆ ಅದರಲ್ಲಿ ಎರಡು ಮಾತಿಲ್ಲ...
👉🏻ರೂಪಕ, ಉಪಮೆಗಳ ಬಳಕೆ ಸೂಪರ್
👉🏻ಆದರೆ ಗಜಲ್ ನಿಯಮ ಪಾಲನೆಯಾಗಿಲ್ಲ.. ಕಾಫಿಯಾ ಕೈಕೊಟ್ಟಿದೆ.. ನಿಮ್ಮ ಗಜಲ್ ನಲ್ಲಿ *ಅದ್ಭುತವದು* *ಮಾರ್ಗವದು* ಎಂಬುದು ಕಾಫಿಯಾ ಆಗಿದೆ.. ಮತ್ಲಾದಲ್ಲಿ ಅದನ್ನೇ ಕಾಫಿಯಾ ಆಗಿ ಬಳಸಿದ್ದೀರಾ.. ಆದರೆ ನಂತರದ ಎಲ್ಲಾ ಚರಣದಲ್ಲಿ ಕಾಫಿಯಾ  *ದ* ದಿಂದ ಮುಕ್ತಾಯಗೊಂಡಿದೆ.. ಗಮನಿಸಿ..
👉🏻ಉಳಿದಂತೆ ನಿಮ್ಮ ಗಜಲ್ ಅದ್ಭುತವಾಗಿದೆ..👌👌👌👌👌👌

✍🏻 *ಮನು  ವೈದ್ಯ*
[3/30, 10:06 AM] Wr Manu Vaidya: *ಪ್ರೇಮಕ್ಕಾ ನಮಸ್ತೆ*

ಈ ಬೂಮಿಯಲ್ಲಿ ಹುಟ್ಟಿದ ಪ್ರತೀ ಜೀವ ಜಂತುವಿಗೂ ಸಾವು ಎಂಬುದು ಖಚಿತ.. ಆದರೂ ಬದುಕಲೇ ಬೇಕು... ಅದೇ ಸೃಷ್ಟಿಯ ನಿಯಮ ಎಂಬ ಭಾವ ಸೂಚಿಸುವ ನಿಮ್ಮ ಗಜಲ್ ವಿಭಿನ್ನವಾಗಿ ಮೂಡಿ ಬಂದಿದೆ..

ನಿಮ್ಮ ಗಜಲ್ "ಗೈರ್ ಮುರದ್ಧಪ್" ಗಜಲ್ ಎಂದು ಪರಿಗಣಿಸಬಹುದು.. ಇಲ್ಲಿ ರದೀಫ್ ಇಲ್ಲ... ಆದರೂ ಗಜಲ್ ವಿಭಿನ್ನವಾಗಿ ಮೂಡಿ ಬಂದಿದೆ..

ನಿಮ್ಮ ಗಜಲ್ ಬಗ್ಗೆ ಒಂದೆರಡು ಮಾತುಗಳು...

👉🏻ಗಜಲ್ ನಿಯಬದ್ಧವಾಗಿ ಉತ್ತಮವಾಗಿ ಮೂಡಿ ಬಂದಿದೆ
👉🏻ವಿಭಿನ್ನವಾಗಿ ಬರೆಯುವ ಪ್ರಯತ್ನ ಶ್ಲಾಘನೀಯವಾದುದು
👉🏻ಸರಳ ಪದ ಬಳಕೆಯಲ್ಲಿ ಗಜಲ್ ಸುಂದರವಾಗಿದೆ
👉🏻ಒಟ್ಟಿನಲ್ಲಿ ಉತ್ತಮವಾದ ಗಜಲ್...

✍🏻 *ಮನು ವೈದ್ಯ*
[4/2, 6:12 PM] Wr Vara Lakshmi: ಪ್ರೇಮ್ ಅವರ ಪದ ಸಂಗಾತಿ
   ಪಕಾರದ ಪ್ರಾಸದ ಲಾಲಿತ್ಯ ಮನ ಸೆಳೆಯುತ್ತದೆ. 
ಪ್ರಣಯ ಅನ್ನುವುದು ಕೇವಲ ಪ್ರೇಮಿಗಳ ಮಧ್ಯೆ  ಅಲ್ಲ,  ಭಾವಗಳು   ಬೆರೆತರೆ ಸಮರಸ ತಾನಾಗಿ ಬರುವುದು, 
ವಿ‌ಭಿನ್ನವಾದ ಕಲ್ಪನೆಯಲ್ಲಿ ತೇಲಿಸುವ ಗೀತೆ. ಅಧ್ಭುತವಾದ
ಪದಗಳ ಭಂಡಾರವಿದೆ ಕವಯತ್ರಿಯಲ್ಲಿ.
ಧನ್ಯವಾದಗಳು 🙏
[4/2, 7:12 PM] Wr Shivaprasad Aradhya: ಪ್ರೇಮ ತಾವು ಪ್ರತಿಭಾವಂತೆ ಬಹಳ ಸೊಗಸಾಗಿ ಪ್ರಾಸಮಯ ಗೀತೆಯ ಬರೆದಿಹಿರಿ ಭಲೆ ಭಲೇ

ಶಿವಪ್ರಸಾದ್ ಆರಾಧ್ಯ
[4/3, 6:49 AM] Wr Shivaprasad Aradhya: ಪ್ರೇಮ ವಾವ್ ವಾವ್ ಬಾಪ್ರೇ ಇದಮ್ಮಾ ಭಾವನೆಗಳ ಮೇರು ಸೂಪರ್.
ಸಮಯ.ಆದರೆ ಸಾಲುಗಳನ್ನು ಕಿರುಗೊಲಿಸಿದರೆ ಲಯ ಮತ್ತು ಹಾಡಲು ಸುಂದರ.ವಿಮರ್ಶಕರು ಉಪಮೆಗಳ ನಿರೀಕ್ಷೆ ಮಾಡುವರು. ಅದೂ ಒಂದೆರಡೆಡೆ ಬಂದಿದೆ ಮತ್ತಷ್ಟು ಬಂದರೆ ನೀವು ಅತ್ಯುತ್ತಮ ಕವಿ.

ಬದುಕಿನ ಸಿಂಹಾವಲೋಕನವಿದು
ಸಿಡುಕಿನ ಕಾಲವಲ್ಲವಿದು!!
ಪಡೆದ ಜ್ಞಾನವ ಬಳಸುವ ಸಮಯ
ಬಾಳಿನ ಮುಸ್ಸಂಜೆಯು ಇನಿಯ!!

ಭಲೆ ಭಲೆ.ಬದುಕಿನ ಸಿಂಹಾವಲೋಕನ ವಾರೆವಾಹ್.

ಚಿಪ್ಪಿನೊಳಗಿಂದ ಹೊರಗಡೆ ಬಂದು
ತಾನು ಕಲಿತುದ ಸಮಾಜಕೆ ತಂದು,
ಮನೆ ಮನ ಗೆದ್ದು ಮಾರು ಗೆಲ್ಲೆಂದು,
ಬುದ್ಧಿಯ ಹೇಳುವ ಸಮಯವು ಇಂದು.

ಸೂಪರ್ ಸಾಲುಗಳು.

ಮಕ್ಕಳು ದೂರ, ಕಾರ್ಯದ ಭಾರ!
ನನಗೆ ನೀನು ನಿನಗೆ ನಾನು ಭರಪೂರ!
ಹಾರಾಡಲು ಬಹುದು, ಇಲ್ಲವು ಪಂಜರ!
ಜನಸೇವೆಯು ಆಗಲಿ ನಿತ್ಯ ನಿರಂತರ!!

ಸರಳ ಅರ್ಥಪೂರ್ಣ ಸಾಹಿತ್ಯ.

ದಿನಗಳ ಸಿಹಿಕಹಿ ರುಚಿಯನು ನೋಡಿ,
ಮನಗಳ ಅಳೆಯುತ ತುಲನೆಯ ಮಾಡಿ!
ಪಕ್ವತೆ ಪಡೆಯುತ ಬಹಳವೆ ಗುದ್ದಾಡಿ!
ಬಾಳಿನ ಇಳಿ ಸಂಜೆಯಲಿ ಆಟವನಾಡಿ!!

ಭಲೇ

ಸಂತಸದಲಿ ಸಮಯವ ಜಾರಿಸಿ ಕಲಿಸುತ,
ಕಲಿತಿಹ ಪಾಠವ ಕಿರಿಯಗೆ ತಿಳಿಸುತ,
ಹೊಸಹೊಸ ವಿದ್ಯೆಯ ತಾನೂ ಕಲಿಯುತ!
ಪ್ರತಿ ದಿನಗಳ ಖುಷಿಯ ಕ್ಷಣಗಳಾಗಿಸುತ!!

@ಪ್ರೇಮ್@ ಬಳಗದ ಪ್ರತಿಭೆ ನೀವು ಬಹಳ ಚೆನ್ನಾಗಿ ಬರಯುತ್ತಿರಿ ಭಲೆ
03.04.2019

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ