ಬುಧವಾರ, ಏಪ್ರಿಲ್ 3, 2019

896. ನ-"ಕಾರ"

ನಯನ

ನಮ್ಮ ನಯನ ನಯದಿ ನೋಡೆ
ನಾಲ್ಕು ನದಿಯ ನರ್ತನ!!
ನಯನವದು ನರಿಯಂತಾಗೆ
ನಮಗರಿವಿಲ್ಲದ ನರಳಾಟ!

ನಮನ ನಿತ್ಯ ನೈಜ ನೋಟದ
ನವ್ಯದಿ ನಲಿವ ನಯನಕೆ!
ನೇರ ನುಡಿಯಲಿ ನೋಯಿಸದ
ನಕಲು ನಕ್ಷಾಫಲಕಕೆ!!

ನೂಪುರದಲು ನೂಕುವಂಥ,
ನಾದದಲು ನಕರಾತ್ಮಕತೆ,
ನರಕದಲು ನಲಿವಿರದೆ,
ನೋವ ನುಂಗಿ ನಗದಂತೆ!

ನಲಿವ ನಭವ ನಗಿಸದಂತೆ!
ನಕ್ಕು ನಲಿದು ನಡೆಯದಂತೆ!!
ನಭದಿ ನಾಚಿ ನಡೆಯದಂತೆ!
ನಾತಬೀರಿ ನರರನೆಲ್ಲ ನೂಕದಂತೆ..

ನೋಟವೇನೋ ನಾಚಿಕೆಯಂತೆ!
ನಖದಿ ನಗಾರಿ ನುಡಿಸಿದಂತೆ!!
ನಿಂಬೆ ನುಂಗಿ ನಲುಗಿದಂತೆ!
ನೊಣವು ನವಿಲಂತೆ ನರ್ತಿಸಿದಂತೆ!!

ನಕಾರಾತ್ಮಕ ನರಳಾಟವು
ನಕುಲನೆಂದು ನಟಿಸಿದಂದ!
ನಾವಿರಲು ನೀವಿರುವಿರಿ,
ನವರಸವನರೆದು ನಾವೇ ಕುಡಿದಂತೆ!

ನಾಲ್ಕು ನುಡಿಯ ನಳಪಾಕವ
ನಲ್ಮೆಯಿಂದ ನಡೆಸಿರಿ!!
ನೋಟದಾಗೆ ನಂದಿನಿಯ ನಾದರಂಗ ನಡೆದವು
ನವಿರಿನ ನಗೆಗಡಲಲಿ ನಲಿದಂತೆ..

ನೆನಪಿನಾಳದ ನಂಜಿರದ ನಮೃತ
ನವಕಾವ್ಯದ ನವಚೈತನ್ಯದುದಯ!
ನೂರ್ಕಾಲ ನೂಕೋ ನರವಂಶ!
ನಕಾರವಿಲ್ಲದ ನೋಟದ ನಮಸ್ಕಾರ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ