Wr Rathna Badavanalli: ಮೊದಲ ಕವನ ಪ್ರೇಮ್ ರವರ *ನಿನ್ನಿಂದ*
ಎಲ್ಲವೂ ನಿನ್ನಿಂದೆನುವ ಭಾವ
ಮೊದಲ ಚರಣವೇ ಬಳ್ಳಿಗೆ ಮರವು ಆಸರೆ
ಚೆಂದದ ಸಾಲು
ಭಾನೂ
ಬಾನು ಸರಿ
ಕೊನೆಯ ಚರಣದಲ್ಲಿ
ನಿನ್ನಿರವಿಂದ
ನಿನ್ನಿರುವಿಂದ ಆದರೂ ಸರಿ
ನಿನ್ನರವಿಂದ ಅಂದರೂ ಅರ್ಥವಿದೆ
ಆದಷ್ಟೂ ಒಂದು ಪದ ಪದೇ ಪದೇ ಬಳಕೆಯಾಗದಂತೆ ಬರೆದರೆ ಚೆಂದ ಕವನ,ಕವಿತೆ ಯಾವುದಾದರೂ
ಹಾಗೂ ಬಳಕೆ ಮಾಡಿದರೆ
ಕ್ರಮವಾಗಿ ಬಳಸಿದರೆ ಚೆಂದ
ಅನಿಸಿಕೆ ಹೇಳಿದೆ
ಬೇಸರ ಬೇಡ
*ಪ್ರೇಮ್ ರವರೆ*
ಬಲು ಸುಂದರ ಹಾಗೂ ಪ್ರಾಸಭರಿತ ಕವಿತೆಗೆ ನನ್ನ ನಮನಗಳು..
ಅದೆಷ್ಟು ಸೊಗಸಾಗಿದೆ ತಮ್ಮ ಕವಿತೆ ಓದಲು ಎಂದರೆ, ಕುಣಿಯುತ ಕುಣಿಯುತ ಪುಟ್ಟ ಮಕ್ಕಳೇ ಹಾಡುವಂತಿದೆ.
ಓದುವಾಗ ಸಾಲುಗಳು ಕೆಳಗಿನಂತಿದ್ದರೆ ಇನ್ನೂ ಸೂಪರ್ ಆಗ್ತವೆ ಅನ್ನುಸ್ತು.
ಮುನ್ನಡೆಗೆ ಆಲಿಂಗನ ನೆರವು
ಬದುಕಲಿ ಸಾಗಲು ಪ್ರೀತಿಯ ಒಲವು
ಎತ್ತರಕೇರುತ ಸಾಗುವ ಮನವು
ಧರೆಗಾನಂದ ತಣ್ಣನೆ ನೆನಯುತ
ನಾನು ನನ್ನದೆಂಬುದು ಎಲ್ಲಿಂದ
ಸರ್ವಸಮರ್ಪಿಸಿ ಪಡೆವಾನಂದ
🙏🙏🙏
*ಪ್ರೇಮಾ ಮೇಡಂ ಅವರ ನಿನ್ನಿಂದ ಕವಿತೆ*
ನಾನು ನನ್ನಿಂದ ಏನೂ ಇಲ್ಲ, ಎಲ್ಲವೂ ನಿನ್ನಿಂದ ಎಂದು ಸಾರುತಿರುವ ನಿಮ್ಮ ಕವಿತೆ ಚಂದ ಚಂದ!! ಎಷ್ಟೋ ಬರಹಗಳು ಬರಹದ ಹಂಗಿಗೆ ಬಿದ್ದು ಸ್ವಲ್ಪಮಟ್ಟಿಗೆ ಭಾವದಲ್ಲಿ ಕೊರತೆ ಕಾಣಿಸಿಬಿಡುತ್ತದೆ. ನೀವು ಎರಡನ್ನೂ ಸರಿದೂಗಿಸಿಕೊಂಡು ಹೋಗಿದ್ದೀರಿ.
ಕೊನೆಯ ಪ್ಯಾರಾ ತುಂಬಾ ಇಷ್ಟವಾಯಿತು. ನಿನ್ನಿರವಿಂದ ಪದ ಬಳಕೆ ಇಷ್ಟವಾಯಿತು. ಕನ್ನಡ ಭಾಷೆಯ ಶ್ರೀಮಂತಿಕೆ ಇದು. ಪದ ತಪ್ಪಾಗಿ ಟೈಪಿಸಿದ್ದೀರಾ ಎಂದುಕೊಂಡೆ, ಆದ್ರೆ ಆ್ಯಕ್ಚೂಯಲಿ ಆ ಥರ ಪದ ಇದೆ.
*ಇರವು = ಅಸ್ತಿತ್ವ, ಇರುವಿಕೆ*
*ಎಲ್ಲವೂ ಅವನ ದಯೆ, ನಾನು ನನ್ನದು ನಶ್ವರ* ಎಂಬ ಸಂದೇಶ ನೀಡಿದ ನಿಮ್ಮ ಕವಿತೆಯನು ಓದಿ ಬೆಳ್ಳಂಬೆಳಗ್ಗೆ ಚೂರು ಎಕ್ಸ್ಟ್ರಾ ಒಳ್ಳೆಯವನಾದೆ. 💐💐
ಇಷ್ಟವಾಯಿತು ಮೇಡಂ 💐😊
ಧನ್ಯವಾದಗಳು 💐😊
ಅಭಿ
: ಪ್ರೇಮ ಅವರ *ನಿನ್ನಿಂದ*
ಪ್ರತಿಯೊಂದು ಬಳ್ಳಿಗು ಮರವೆ ಆಸರೆ
ಪ್ರಯಿಯೊಂದು ಮಗುವಿಗು ತಾಯಿಯ ಪ್ರೀತಿಯೆ ಆಸರೆ
ಈ ಜೀವನದಲ್ಲಿ ಚೆನ್ನಾಗಿ ಬಾಳಬೇಕು ಎತ್ತರಕ್ಕೆ ಬೆಳೆಯಬೇಕು ಎಂದರೆ ಎಲ್ಲದಕ್ಕು ಪ್ರೀತಿಯ ಸಹಕಾರ ಬೇಕು' ಒಳ್ಳೆಯ ಗುಣಬೇಕು ನಾನು ನನ್ನಿಂದ ಅಹ್ಂ ಅನ್ನುವುದನ್ನು ಬಿಟ್ಟರೆ ಬದುಕಲಿ ಮೇಲೆರಲು ಸಾಧ್ಯ್..
ಜೀವನದಲ್ಲಿ ಮುಂದೆ ಬರಬೇಕು ಸಾಧನೆ ಮಾಡಬೇಕು ಅಂದರೆ ಶ್ರದ್ಧೆ, ಆತ್ಮಬಲ, ಮಾಡೆ ಮಾಡುವೆ ಎನ್ನುವ ಛಲವಿರಬೇಕು ಆವಾಗ ನಾವು ಕಂಡ ಕನಸುಗಳೆಲ್ಲ ನನಸಾಗುವುದು ಖಚಿತ, ಹಾಗೆ ಮಾನವ ಮಾನವರನ್ನು ಅರ್ಥ ಮಾಡಿಕೊಳ್ಳದೆ ಬದುಕುವುದರಿಂದ ಯಾವ ಪ್ರಯೋಜನವಿಲ್ಲ ' ಅರಿತು ಬೆರೆತು ಬಾಳಬೇಕು , ಸಂಕೊಚವನ್ನು ಬಿಟ್ಟು ನಾನು ಎನ್ನುವುದನ್ನು ಬಿಟ್ಟು ನಾನೊಬ್ಬ ಮಾನವನೆಂದು ತಿಳಿದು ಇನ್ನೊಬ್ಬ ಮಾನವನಿಗೆ ಬೆಲೆ ಕೊಟ್ಟು ಮಾನವಿಯತೆಯ ದೃಷ್ಟಿಯಿಂದ ಪ್ರೀತಿಯಿಂದ ಸಹಕರಿಸುತ್ತ ಬಾಳಬೇಕು ಇದುವೆ ಸತ್ಯ ಇದುವೆ ಜೀವನ
ಈ ಪ್ರೀತಿ ಎನ್ನುವ ಮಹಾಸಾಗರದಲ್ಲಿ , ತೆಲುತ್ತ ಸಾಗಬೇಕು' ಜೀವನದ ಪ್ರತಿ ಕ್ಷಣವನ್ನು ಇನ್ನೊಬ್ಬರನ್ನು ಪ್ರೀತಿಸುತ್ತ ತನ್ನ ತಾ ಪ್ರೀತಿಸುತ್ತ ಕೋಪ ತಾಪಗಳನ್ನೆಲ್ಲ ಬಿಟ್ಟು
ಈ ಪ್ರೀತಿಯೆಂಬ ಸಾಗರದಲ್ಲಿ ಮುಳುಗಬೇಕು ಮಿನುಗಳಂತೆ ಈಜುತ್ತ ತೆಲುತ್ತ ಕುಣಿಯುತ್ತ ಜೀವನದ ಬಂಡಿ ಸಾಗಿಸಬೇಕು
ನಿನ್ನನ್ನು ನೀನು ಅರಿತು ಬಾಳಿದಾಗ ಈ ಜೀವನ ತುಂಬ ಸೊಗಸು
*ನಾನು ನನ್ನಿಂದ ಬಂದುದು ಎಲ್ಲಿಂದ..?* ಹೌದು ಈ ನಾನು ಬಂದಾಗಿನಿಂದ ಈ ಜೀವನ ಈ ಬದುಕು ಈ ಪ್ರಪಂಚ ನರಕವಾಗಿದೆ
ಮಾನವಿಯತೆಯನ್ನು ಭಸ್ಮ್ ಮಾಡುತ್ತಿದೆ
ಮನುಷ್ಯ ಮನುಷ್ಯರನ್ನೇ ಕೊಂದು ತಿನ್ನುತ್ತಿದೆ ಈ ನಾನೆಂಬ ಮೂಢ
ಈ ನಾನು ಅನ್ನುವುದು ಬಂದಿದ್ದೆ:- ನಮ್ಮಿಂದ,ನಮ್ಮ್ ಅತಿ ಆಸೆಗಳಿಂದ, ನಮ್ಮ್ ಕೆಟ್ಟ ಆಲೋಚನೆಗಳಿಂದ, ನಮ್ಮ್ ಪಂಚೆಂದ್ರಿಯಗಳ ಸುಖಕ್ಕಾಗಿ ಬಯಸುವುದರಿಂದ...
ನಾನು ಅಂದರೆ ಬೇರೆ ಏನಿಲ್ಲ್- *ಅಹ್ಂ,ಭ್ರಮೆ,ನಮ್ಮ್ ಜೀವಂತ ಸಮಾಧಿ, ನಾನೆ ಶ್ರೇಷ್ಠ ಅನ್ನುವ ಭಾವ,ನಾನೆ ಎಲ್ಲವು ನನ್ನಿಂದ,ಎಲ್ಲರು ನನ್ನ ಮಾತೆ ಕೇಳಬೇಕು ಎಂದು ಮಾಡುವ ವಿಚಾರ*
ಓ ಮೂಢ ಮನುಜನೇ ಬಿಡು ಈ ನಾನು ಎನ್ನುವುದನ್ನು.. ಎಂದು ಹೇಳುತ್ತ ಬರೆದಿರುವ ಈ ನಿಮ್ಮ ಕವನ ಸುಂದರ...
*ಸರ್ವವ ಸಮರ್ಪಿಸಿ ಪಡೆಯುವ ಆನಂದ*
👆👉ಹೌದು ಎಲ್ಲವನ್ನು ಬಿಟ್ಟು ಒಳ್ಳೆಯ ಮನಸಿಂದ, ಒಳ್ಳೆಯ ದಾರಿಯಿಂದ, ಒಳ್ಳೆಯ ಮಾನವಿಯತೆಯ ಹಾದಿಯಲ್ಲಿ ಬದುಕುವುದರಿಂದ, ಪ್ರೀತಿ ಪ್ರೇಮವನ್ನು ಹಂಚುತ್ತ, ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮಾನವರಂತೆ ಬಾಳುವುದರಿಂದ ಸಿಗುವ ಆನಂದ ಬೇರೆ ಎಲ್ಲಿಯೂ ಸಿಗುವುದಿಲ್ಲ
ಎಲ್ಲವು ನಮ್ಮಲ್ಲೇ ಇದೆ ಹಾಗಾಗಿ ನನ್ನದು ನನ್ನಿಂದ ನಾನು ಎನ್ನುವುದನ್ನು ಬಿಡು ಓ ಮನವೇ ಎಂದು ಹೇಳುವ ಈ ನಿಮ್ಮ ಭಾವನೆಯ ಸುಂದರ ಬರಹಳಿಗೆ...ನನ್ನ ನಮನಗಳು
*ನಾನು*… ಎನ್ನುವವನಿಗೂ ಸಾವಿದೆ
*ನೀನು* ಎನ್ನುವವನಿಗೂ ಸಾವಿದೆ
ಇಷ್ಟೆ ವ್ಯತ್ಯಾಸವೆಂದರೆ::-- *ನಾನು ಎನ್ನುವವ ತನ್ನನ್ನು ತಾ ಪ್ರೀತಿಸದೆ ಇನ್ನೊಬ್ಬರ ಪ್ರೀತಿಯನ್ನು ಪಡೆಯದೆ ಎಲ್ಲರೂ ಜೊತೆಗಿದ್ದರು ಸಾಯುವಾಗ ಅನಾಥವಾಗಿ ಹೋಗುವನು*
*ನೀನು ಎಂದು ಬಾಳುವವನು ತನ್ನನ್ನು ತಾ ಅರಿತು, ಇತರರನ್ನು ಅರಿತು,*
*ತನ್ನನ್ನು ತಾ ಪ್ರೀತಿಸುತ್ತ ಇತರರನ್ನು ಪ್ರೀತಿಸುತ್ತ ಸಾಯುವಾಗ ತನ್ನ ಸಾವಿನ ಜೋತೆಗೆ ಪ್ರೀತಿಯೆನ್ನು* *ಹೊತ್ತುಕೊಂಡು ಹೋಗುವನು,*
*ಎಲ್ಲರ ಮನದಲ್ಲಿ ಅಮರವಾಗಿ ನೆಲೆಸುವನು..*
ಕವಿ ಭಾವಕ್ಕೆ ಧಕ್ಕೆ ಆದಲ್ಲಿ ಕ್ಷಮಿ ಇರಲಿ 👏🏻
*🎻ಆಕಾಶ ವಿ ಸಂಬಾಜಿ*
*ಬೀದರ್🎻*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ