ಶುಕ್ರವಾರ, ಜನವರಿ 29, 2021

2ರುಬಾಯಿಗಳು

ರುಬಾಯಿ-1

ಸಂತಸಯುತ ಮನವಿರಲು ಹಕ್ಕಿಯಂತೆ ಹಾರಾಡುವೆ
ಬೇಸರದಲಿ ತಾನಿರಲು ಮನದೊಳಗೆ ಕುದಿಯುವೆ
ಬಳಿಯಲಿರಬೇಕು ಮನಕೆ ಒಲವೆಂಬ ಮಂತ್ರ
ಹಣ, ಧನಕಿಂತಲೂ ಅಧಿಕವಾಗಿ ಸುಖಿಸುವೆ 

ರುಬಾಯಿ-2

ಮೋಹ ಪಾಶಕೆ ಸಿಗದಿರು ಮನವೇ
ರೋಗ ನಾಶಕೆ ತುತ್ತಾಗದಿರು ತನುವೇ
ಕಷ್ಟಪಟ್ಟು ಅನುಕ್ಷಣ ದುಡಿದು ಬದುಕು
ಪರೋಪಕಾರಕೆ ಜೀವನವ ಮುಡಿಪಾಗಿಡು ಜೀವವೇ..
@ಪ್ರೇಮ್@
16.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ