ಶುಕ್ರವಾರ, ಜನವರಿ 29, 2021

ಚುಟುಕು

ಚುಟು-ಕು

1

ಕುಟುಕುವಂತಿರಬೇಕು ನಿಮ್ಮ ಅಂದದ ಚುಟುಕು
ಕುಟುಕಲು ಬಾರದಿರೆ ಜನರ ಕಲಕು
ಲೇಖನಿಯಲೆ ತೋರಿಸು ಮನಗಳ ಹುಳುಕು
ತೊಳೆದು ಹೋಗಲಿ ಸಮಾಜದ ಕೊಳಕು..

2.

ಕುಟುಕುತ್ತಿರಬೇಕು ಆಗಾಗ ತೆಗೆಯಲು ಕೊಳಕು
ಬರೆಯುತ್ತಿರಬೇಕು ಕವಿಗಳು ಉತ್ತಮ ಚುಟುಕು
ಕೇಳುಗರು ಕಿವಿಗೊಟ್ಟು ಅದನೇ ಕೇಳುವಂತಿರಬೇಕು
ಓದುಗರು ಕಣ್ ಹಾಯಿಸಿ ಓದಿತಿಳಿಯುವಂತಿರಬೇಕು!
@ಪ್ರೇಮ್@
18.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ