ಶುಕ್ರವಾರ, ಜನವರಿ 1, 2021

ಕವನಗಳು




[4/6, 1:35 PM] Anna: ಮನಸ್ಸೆಂಬ ಮಂದಿರದಲ್ಲಿ



 ಮನಸ್ಸೆಂಬ ಮಂದಿರದಿ,
ನೀನೇ ನನ್ನ ದೇವತೆ,,,
ಯಾರಿಗೂ ಕಾಣದ ನನ್ನ
ಆರಾಧ್ಯದೈವ,,,
ಅಲ್ಲಿ ನಿನ್ನ ಪ್ರೀತಿಯ ಅರ್ಚನೆ,
ಶ್ಲೋಕ, ಜಪ-ತಪಗಳೆಲ್ಲ
ನಿರ್ವಿಘ್ನವಾಗಿ ಸಾಗುತಿವೆ,,,
ಯಾರ ಹಾಗೂ ಯಾವ ವಿರೊಧವೂ ಇಲ್ಲದೆ,,,
[4/6, 2:06 PM] Anna: ಮನಸ್ಸು ಮುಟ್ಟದೆ ಕನಸಲಿ ಬರಲು ಹೇಗೆ ಸಾಧ್ಯ,,,,,,
ಎಲ್ಲೋ ಇದ್ದ ನೀನು ಇನ್ನೆಲ್ಲೋ
ಇದ್ದ ನಾನು,
ಆತ್ಮಾನುಭಂದವಿರದೆ ಸೇರಲು
ಹೇಗೆ ಸಾಧ್ಯ,,,,,
ಕಾರಣವಿರದೇ ಮನದಲಿ ಪ್ರೀತಿ
ಮೂಡಲು ಹೇಗೆ ಸಾಧ್ಯ,,,,,
ನಿನ್ನಲ್ಲೇ ಒಂದಾದ ಮೇಲೆ,
ಉಸಿರಿರದೆ ಜೀವವಿರಲು,
ಹೇಗೆ ಸಾಧ್ಯ,,,
[4/6, 2:06 PM] Anna: ಇವಳು ನನ್ನೊಲವಿನ ದೇವತೆ |
ನಾನು ಇವಳಾರಾದಿಸುವ ಭಕ್ತ||

ನನ್ನೆದೆಯ ಮಂದಿರವೇ|
ಇವಳಿಗೆ ಗರ್ಭಗುಡಿ ||

ನನ್ನ ಉಚ್ವಾಸ ನಿಶ್ವಾಸವೇ|
ಇವಳಿಗೆ ಮಂಗಳಾರತಿ||

ನನ್ನ ಸ್ಮ್ರತಿ ಪುಟದಲ್ಲಿ
ಇವಳ ಅಂದ ಚಂದದ
ವರ್ಣನೆಯೇ ಮಂತ್ರ ಘೋಷಗಳು ||

ನನ್ನ ಹೃದಯದ
ಅಪಧಮನಿ, ಅಭಿಧಮನಿಗಳೇ
ಇವಳಿಗೆ ತೀರ್ಥ ಪ್ರಸಾದಗಳು||@prem@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ