ಶುಕ್ರವಾರ, ಜನವರಿ 1, 2021

ಕತೆ, ಕವನಗಳು




[8/7, 9:57 PM] Wr Mallesh G Raj: ಶ್ರಮ
 ಊರಿನಲ್ಲಿ ಗಂಡನನ್ನು ತೋಟ ನೋಡಿಕೊಳ್ಳಲು ಬಿಟ್ಟು ಪಟ್ಟಣದಲ್ಲಿ ಮನೆ ಮಾಡಿಕೊಂಡು ತನ್ನೆಲ್ಲಾ ಸಂತಸವನ್ನು ಮರೆತು ಮಕ್ಕಳಿಗಾಗಿಯೇ ತನ್ನ ಜೀವನ ಮುಡಿಪಾಗಿಟ್ಟರು ರಾಜೇಶ್ವರಿ ರೈ. 
     ಮಗ ಮೆಡಿಕಲ್ ಮೊದಲ ರ್ಯಾಂಕ್, ಮಗಳು ಇಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲಿಸ್ಟ್. ತಾಯಿಯ ಸಂತಸ ಮೇರೆ ಮೀರಿದೆ. ಶ್ರಮ ಫಲಿಸಿದೆ.
@ಪ್ರೇಮ್@
03.04.2020
[8/7, 9:57 PM] Wr Mallesh G Raj: ಪರಿಣಾಮ

     ಹೆತ್ತವರು ಎಷ್ಟು ಕೇಳಿದರೂ ವಿನುತ ಅವರ ಮಾತು ಕೇಳದೆ ಸಂಜೆ ನಾಲ್ಕರಿಂದ ರಾತ್ರಿ ಒಂದರವರೆಗೆ ಮೊಬೈಲ್ ನೋಡುತ್ತಾ ಅವರಿವರೊಡನೆ ಚಾಟ್ ಮಾಡ್ತಾ ಸಮಯ ಕಳೆಯುತ್ತಿದ್ದಳು. 
   ಒಂದೇ ವರುಷ. ಪರಿಣಾಮ ತಿಳಿಯಿತು. ಕಣ್ಣು ಕಾಣದಾಯಿತು, ಪಿತ್ತ ಹೆಚ್ಚಾಗಿ ವಾಂತಿ, ತಲೆಸುತ್ತು, ಗ್ಯಾಸ್ಟ್ರಿಕ್ ಪ್ರಾರಂಭವಾಯ್ತು. ಜ್ಞಾಪಕ ಶಕ್ತಿ ಕಡಿಮೆ ಆಯ್ತು, ಪದವಿಯ ಸರ್ಟಿಫಿಕೇಟೂ ನಾಟ್ ಕಂಪ್ಲೀಟ್ ಅಂತ ಬಂತು!
@ಪ್ರೇಮ್@
04.04.2020
[8/7, 9:57 PM] Wr Mallesh G Raj: ಗಝಲ್

ನೊಂದ ಮನದ ಕಣ್ಣೀರೊರೆಸುವ ಕೈಯಾಗು ನೀ
ಬಡವರ ಪಾಲಿಗೆ ಆಸರೆಯಾಗುವ ವರವಾಗು ನೀ..

ಸೋಲಿನಲಿ ಸೋತವರು ಬಹಳ ಜನರಿಹರು ಜಗದಲಿ
ಗೆಲುವಿಗೆ ಭರವಸೆ ಕೊಡುವ ನಲಿವಾಗು ನೀ..

ಬದುಕಿನಲಿ ಭಯಪಡುವ ಭವಿಷ್ಯ ಬರಿದಾಯಿತೆನುವ ಬಡವರಿಹರು.
ಬಡತನದ ಬವಣೆಯ ಕಳೆಯುವ ಊರುಗೋಲಾಗು ನೀ..

ಮನ ಮುದುರಿಸಿ ಸಾವಿಗೆ ಶರಣಾಗುವವರೂ ಇಹರು
ಹೊಸಬಾಳಿಗೆ ಅವಕಾಶಗಳ ಕೊಡುವ ನಾಯಕನಾಗು ನೀ..

ಮೈಗಳ್ಳರು ಕಳ್ಳತನದಿ ಇತರರ ತಲೆಯೊಡೆಯುವ ಯೋಚನೆಯಲಿಹರು
ಕೆಲಸ ಮಾಡದೆ ಸುಖಪಡುವವರಿಗೆ ಭದ್ರಕಾಳಿಯಾಗು ನೀ..

ಗಿಡಮರಗಳು ನೀರಿಲ್ಲದೆ ಅಳುವಾಗ ಕಡಿದು ಮುಗಿಸುವವರಿಹರು.
ಸಾಲು ಮರದ ತಿಮ್ಮಕ್ಕನಂತೆ ನಗುವಾಗು ನೀ..

ಅನಾಥ ಮಕ್ಕಳು ಕ್ಷಣದ ಪ್ರೀತಿಗೆ ಹಂಬಲಿಸುತಿಹರು.
ಪ್ರೇಮವುಣಿಸುವ, ಸಂತೈಸಿ ಸಲಹುವ ದೇವತೆಯಾಗು ನೀ..
@ಪ್ರೇಮ್@
05.04.2020
[8/7, 9:57 PM] Wr Mallesh G Raj: ಭಾವಗೀತೆ

ಪೂರ್ಣ ಚಂದಿರ

ಬಹಳ ಸುಂದರ ಬಾಳ ಚಂದಿರ
ನಗುತಲಿರಲು ಮನವು ಮಧುರ

ಇರುಳ ಬೆಳಗುವ ನಗೆಯು ಚಂದ
ಬಾಳ ಬೆಳಗೆ ತುಸು ಕೋಪ ಅಂದ
ಕಣ್ಣಿನಲ್ಲೇ  ಕ್ಲಿಕ್ಕಿಸಿ ನನ್ನ ಸೆರೆಹಿಡಿದ
ಗುಳಿಕೆನ್ನೆಯಲ್ಲೆ  ಪ್ರೀತಿ ಬೀಳಿಸಿದ!

ನಲಿದು ಕುಣಿದು ಖುಷಿಯ ತಂದ
ಪ್ರತಿ ಮಾತಿನಲ್ಲೆ ಪ್ರೀತಿ ಪದವನಾಡಿದ
ಬಾಳು ಕೊಟ್ಟು ಹೃದಯ ನೀಡಿದ
ಜ್ಯೋತಿ ಬೆಳಗಿಸಿ ನನಗಾಗಿ ಬೇಡಿದ..

ದಯೆಯ ಕಂದ ಮನವು ಅಂದ
ಬಾಳ ಮಿತ್ರನು ಬದುಕಾನಂದ
ನಗೆಯ ಕಾರಂಜಿಯ ಚಿಮ್ಮುತ
ಸೊಗಸ ಕ್ಷಣಗಳ ಪೋಣಿಸುತ್ತ..
@ಪ್ರೇಮ್@
06.04.2020
[8/7, 9:57 PM] Wr Mallesh G Raj: ಭಾವದಲೆಯಲಿ..

ಬದುಕು ಇದ್ದರೆ ಅದು ನಿನ್ನೊಡನಿರಲಿ
ನಿನ್ನ ಹೊರತಾದ ಬದುಕಿಗೆ ಧಿಕ್ಕಾರವಿರಲಿ

ಪ್ರೀತಿ ಇರುವುದಾದರೆ ಅದು ನಿನ್ನೊಡನಿರಲಿ
ಇತರರ ಪ್ರೀತಿಗೆ ಮನ ಬಯಸದಿರಲಿ
ನೊಂದ ಮನಗಳೆರಡು ಜೊತೆ ಸೇರಿ ನಲಿಯಲಿ
ಬಾಳ ರಥವು ವೇಗವಾಗಿ ಮುನ್ನಡೆಯಲಿ

ನಡೆವ ಪ್ರತಿ ಹೆಜ್ಜೆಯೊಂದಿಗೆ ನಿನ್ನ ಹೆಜ್ಜೆ ಸೇರಲಿ
ಹೃದಯದ ಪ್ರತಿ ಬಡಿತವೂ ನಿನಗಾಗಿ ಮೀಸಲಾಗಿರಲಿ
 ತಪ್ಪ ತಿದ್ದುತಲಿ ಮನವೆಂದು ಕಲಿಯುತಲಿ
ನನಗೆ ನೀನು ನಿನಗೆ ನಾನು ಜೊತೆಯಾಗಿ ಸಾಗುತಲಿ

 ನನ್ನೆದೆ ಎದೆ  ಬಾಂದಳದಲಿ ರವಿ ನೀ ಉದಯಿಸುತಲಿ
ರಾತ್ರಿಯಾಗಲು ಬಿಡದೆ ಹಗಲಿರುಳು ಬೆಳಗುತಲಿ.
 ಮಾತು ಮುತ್ತಾಗಿರಲಿ ಪ್ರೀತಿ ತುತ್ತಾಗಿರಲಿ
ಭವದ ಪ್ರತಿ ಕ್ಷಣದಲೂ ನಗೆ ಹೂ ಬಾಡದಿರಲಿ
 
ನಿನ್ನದರಕೆ ನನ್ನುಸಿರ ಬಿಸಿ ಸೇರಿ ತಣಿಯಲಿ
ನನ್ನುಸಿರದು ನಿನಗಾಗಿಯೇ ಕಾದು ಹೊರಬರಲಿ..
ಸರಸ ಸಲ್ಲಾಪದಲಿ ದಿನ ವರ್ಷ ಕ್ಷಣವಾಗಲಿ
ಮಧುರ ಭಾವದಿ ಮನ ಕುಣಿದು ಹಾಡಲಿ
@ಪ್ರೇಮ್@
07.04.2020
[8/7, 9:57 PM] Wr Mallesh G Raj: ಭಾವಗೀತೆ

*ನೃತ್ಯ*

ನಡು ನಡುವಲಿ ಕುಣಿಯುತಲಿ
ನಡುವಲಿ ನವ ನಡುಕ!
ನಡೆ ನಡೆಯುತ ನಲಿಯುತಲಿ
ನಿಶೆಯಂದದ  ಬದುಕ!

ನವಿಲಂತೆಯೆ ನವಿರಾದ
ನರ್ತಿಪ ನಡವಳಿಕೆಯಿದು
ನಾಜೂಕಿನ, ನಿರ್ಮಲದ
ನಾಚಿಕೆಯ ನಿಮಿಷವಿದು!

ನೂರೆಂಟು ಭಾವನೆಗಳ
ನೂಲಿಸುವ ಕಲೆ ಕೃತಿಯು
ನೈಜತೆಯ ನಂಬಿಕೆಯಲಿ
ನಡು ಕುಲುಕಿಸೋ ಮತಿಯು..

ನಾಟ್ಯಕಿದೋ ನಂಜಿರದು
ನಯನದಲೂ ಆಟ!
ನೈಪಣ್ಯತೆ ಬೇಕಿಹುದು
ನಗುನಗುತಲಿ ನೋಟ!
@ಪ್ರೇಮ್@
08.04.2020
[8/7, 9:57 PM] Wr Mallesh G Raj: *ಸುಮಧುರ ಬದುಕು*

*ಸಮರವು ಬೇಡವು ಸುಮಧುರ ಬಾಳಲಿ*
*ಸಮರಸ ಜೀವನ ನಡೆಸುವ ಸಾಲಲಿ*//

*ಮನದಲಿ ಸಂತಸ ಮನೆಯಲಿ ಸಾಹಸ*
*ಉತ್ಸಾಹ ತರುತಲಿ ನವೀನ ಭಾವಕೆ*
*ವದನದಿ ನಗುವೂ, ಮಾತಲಿ ಸತ್ಯವು*
*ಸುಖಮಯ ಜೀವಕೆ ಬೇಕದು ನಿತ್ಯವು*//

*ನೀತಿಯು ಇರಲು ಪ್ರೀತಿಯ ಮಾತದು*
*ಸೂಕ್ತವು ಜಗದಲಿ ಚಿನ್ಮಯ ಸೂಕ್ತಿಯು*
*ಮಂಗಳ ವಾದ್ಯದ ಗಾನದ ಜೊತೆಗದು*
*ನಯನದ ಚೆಲ್ಲಾಟ ಹರಿವಿನ ಗೀತೆಯು*//

*ವಿಷಯದ ಆಳಕೆ ನಿಶೆಯಲಿ ಸೇರುತ*
*ಮನಸಿನ ಬಯಕೆಗೆ ಬೇಲಿಯ ಕಟ್ಟುತ*
*ಸವಿನುಡಿ ಸವಿಮನ ಆಸರೆ ಎಂದಿಗು*
*ಬೆರೆಯುತ ಸಾಗಲು ಕಷ್ಟವ ಮುರಿಯುತ*//
@ಪ್ರೇಮ್@
10.04.2020
[8/7, 9:57 PM] Wr Mallesh G Raj: ಉಸಿರೇ...

ಮನದ ಸನಿಹ
                ತಾನೇ ಬಂದೆ
ಒಲವ ರಾಗ
               ನೀನೇ ತಂದೆ..

ಉಸಿರಿನಲ್ಲೂ ಬೆರೆತ
                ಭವ್ಯ ಪ್ರಾಣವೇ
ಅರಿವಿನಲ್ಲೆ ನಡೆದು
               ಬಂದ ಮೋಹವೇ..

ಎದೆಯ ಭಾವ
              ಹೊಮ್ಮಿ ಚೆಲ್ಲಿ
ನಗೆಯ ಕಡಲು
              ಉಕ್ಕಿ ಹರಿದು..

ಭಾವದಲೆಯ ಏರಿ
              ನಿಂದ ಮೌನವೇ
ವಿನಯದಿಂದ ಬೆರೆತ
              ಪ್ರೇಮ ನಾದವೇ..
@ಪ್ರೇಮ್@
09.04.2020
[8/7, 9:57 PM] Wr Mallesh G Raj: ಭಾವಗೀತೆ

ಕೋಪ

ಕುಂದಿಹ ಮುಖದಲಿ ಕಂಪನ ಏತಕೆ?
ಮರೆತರೆ ಆಗದೆ ಮರೆವಿನ ವಿಷಯಕೆ?//

ಕೋಪವು ನಮ್ಮಯ ಮಾರಿಯ ಕರದಲಿ
ಕಾಡುವ ರಾಕ್ಷಸ, ಬಿಡುತಲಿ ಬಾಳಿರಿ.
ಪರರೆಡೆ ನೋಡುವ ದೃಷ್ಟಿಯು ಬೇರೆಯೆ
ಮನೆಯಲಿ ಮನದಲಿ ಅಗ್ನಿಯ ತೆರದಲಿ//

ಕಣ್ಣದು ಕೆಂಪನೆ, ಗಲ್ಲವು ಹಿಗ್ಗುತ
ಅಗಲದ ಬಾಯಲಿ ಸರ್ವಗೆ ಬೊಗಳುತ
ಹ್ಞೂಂಕಾರವ ಹಾಕಿ  ಬಣ್ಣದ ನೋಟ!
ಹಿಡಿದಂತೆ ದೆವ್ವದ ಮಹದಾದ ಕಾಟ!!

ಅಪ್ಪನೊ ಅಣ್ಣನೊ ಯಾರೂ ಕಾಣರು
ತಮ್ಮನೊ ತಂಗಿಯೊ ಒಂದೂ ತಿಳಿಯರು
ಕೋಪದ ಕೈಗೆಯೆ ಬುದ್ಧಿಯ ಕೊಟ್ಟವ
ನಾಶದ ನಡೆಯೆಡೆ ಹೋಗುವ ರಾವಣ!//


ವಚನದ ಮೇಲೆಯೆ ಹಿತವು ಇಲ್ಲವು
ಪಚನದ ಊಟವ ಮಾಡಿದ ಮರೆತರು
ಬಹು ಕ್ರೋಧದಿ ಜನ ಸರ್ವರ ಮರೆತರು
ತಾನೇ ತನ್ನದು ಎನ್ನುತ ಮೆರೆದರು!//
@ಪ್ರೇಮ್@
11.04.2020
[8/7, 9:57 PM] Wr Mallesh G Raj: ವಿಮರ್ಶೆ

"ಕರವನು ಪಿಡಿಯದೆ ಇಹನೇನು?" ಎನ್ .ಬಿ. ಹಿಳ್ಳೆಯವರ ಕವನ ನಾನು ಆಯ್ದುಕೊಂಡದ್ದು. 
             ಮೊದಲಿಗೆ ನಾನು ಯಾಕೆ ಇದೇ ಕವನವನ್ನು ಆಯ್ದುಕೊಂಡೆನೆಂಬುದಕ್ಕೆ ಎರಡು ಮಾತು. ಕೊರೋನಾದಿಂದಾಗಿ ಲೋಕಕ್ಕೆ ಲೋಕವೇ ಲಾಕ್ ಡೌನ್ ಆಗಿದೆ. ಅಂತೆಯೇ ನಾನೂ ಲಾಕ್ ಡೌನ್. ನನ್ನ ಮನಸ್ಸಿಗೆ ಸಾಂತ್ವನ ಕೊಟ್ಟು ನನ್ನನ್ನು ಮಾನಸಿಕವಾಗಿ ಸದೃಢಗೊಳಿಸಿ, ನನ್ನಲ್ಲಿ ಶಕ್ತಿ ತುಂಬಿದ ಕವನವಿದು. ನಾನು ನಾರಾಯಣ ಭಟ್ರ ಕವನಗಳ ಅಭಿಮಾನಿ ಕೂಡಾ. ಅವರನ್ನು ನೋಡಿಲ್ಲ, ಸಾಮಾಜಿಕ ಜಾಲ ತಾಣಧಲಿ ಅವರ ಕವಿತೆಗಳನ್ನೋದಿ ಖುಷಿ ಪಡುವವರಲ್ಲಿ ನಾನೂ ಒಬ್ಬಳು.

     ಕವಿತೆಯ ವಿಚಾರಕ್ಕೆ ಬಂದರೆ ಇದೊಂದು ಉತ್ತಮ ಭಾವಗೀತೆ, ಭಕ್ತಿಗೀತೆ ಹಾಗೂ ಪ್ರಾರ್ಥನಾ ಗೀತೆ. ಶರ ಷಟ್ಪದಿಯಲ್ಲಿ ರಚಿತವಾದ ಪದಪದಗಳಲ್ಲೂ ಸಂತಸ ಕೊಡುವ ಹಾಡುಗಾರರು ಸುಲಭವಾಗಿ ತಾವೇ ಸ್ವರ ಸಂಯೋಜನೆ ಮಾಡಿ ಸಂತಸಪಟ್ಟು ಹಾಡಬಹುದಾದ ಗೀತೆ.

    ಇದನ್ನೋದುವಾಗ ನನಗೆ ದಾಸರ 'ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಿನ ಗುಳ್ಳೆ… " ಈ ಹಾಡೊಮ್ಮೆ, ಮಗದೊಮ್ಮೆ ಎನ್ ಎಸ್. ಲಕ್ಷ್ಮಿ ನಾರಾಯಣ ಭಟ್ಟರ "ಯಾರು ಜೀವವೇ ಯಾರು ಬಂದವರೂ…" ಕವನಗಳು ನೆನಪಾದವು.  "ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿಹಲು…." ಕನಕದಾಸರೂ ನೆನಪಾದರು. ಸರಳ ಸಾಲುಗಳಲಿ ಓದಿಸಿಕೊಂಡು ಹೋಗುವ, ಸುಶ್ರಾವ್ಯ ಕಂಠವಾಗಬಹುದಾದ ರೂಪಕವಿದು. 

   ಮನದಣಿಯೆ ಓದಿ ಭಟ್ಟರ  ಕಾವ್ಯ ಕಟ್ಟುವ ಕಲೆಗೆ ಶರಣಾದೆ. ಭಯ ಹೋಗಿ ನೆಮ್ಮದಿ, ಸಾಂತ್ವನ, ನಂಬಿಕೆ ಬೆಳೆಸಿದ ಕವನವಿದು.  ಕವನದಲಿ ಭಾಷಾ ಚಿಹ್ನೆಗಳು ಟೈಪಾಗದಿದ್ದುದು ಬೇಸರ ತರಿಸಿತು. ಮುಂದಿನ ಜನಾಂಗ ಅವುಗಳನ್ನೆಲ್ಲ ಮರೆತೇ ಬಿಡುವುದೇನೋ ಎಂಬ ಭಯ, ಭಾಷಾ ಶಿಕ್ಷಕಿಯಾಗಿ ಕಾಡುತ್ತಿದೆ ನನ್ನ. ನಾವೆಷ್ಟು ಭಾಷಾ ಚಿಹ್ನೆಗಳ ಕಡೆಗಣಿಸುತಿರುವೆವು ಎಂಬುದಕ್ಕೂ ಈ ಕವನ ಉತ್ತರದಂತಿದೆ. ಬೇಕೋ, ಬೇಡವೋ ಜಿಜ್ಞಾಸೆಯಲ್ಲೇ ನಾವಿದ್ದೇವೆ. ಕೆಲವರಂತೂ ಕವನದಲಿ ಬೇಡವೆಂದೇ ವಾದಿಸಿ ಅದನ್ನೆಲ್ಲ ತೊರೆದಾಗಿದೆ. ಕಾಲಕ್ಕೆ ತಕ್ಕನಾಗಿ ನಾವೂ ಹೊಂದಿಕೊಂಡು ಹೋಗಬೇಕಾಗಿದೆ ಅಲ್ಲವೇ.
    ಅದೇನೇ ಇರಲಿ , ಕವನದ ಪದ ಬಳಕೆ, ಪ್ರಾಸಗಳು, ಅರ್ಥವತ್ತಾದ ರಚನೆ ನನ್ನನ್ನು ಸೆಳೆಯಿತು. "ಕವನ ಎಂದರೆ ಹೀಗಿರಬೇಕು" ಎಂಬ ಭಾವನೆ ಮೂಡಿತು. 
  ಸರ್, ಇಂತಹ ನೂರಾರು ಕವನಗಳು ನಿಮ್ಮ ಲೇಖನಿಯಿಂದ ಹೊರಬರಲಿ,ನಮ್ಮ ಮನಸ್ಸು, ಕಣ್ಣು, ಕಿವಿಗೆ ಆನಂದ, ಶಕ್ತಿ ನೀಡಲಿ ಎಂಬ ಶುಭ ಹಾರೈಕೆಗಳೊಂದಿಗೆ,
ಧನ್ಯವಾದಗಳು.
@ಪ್ರೇಮ್@
12.04.2020
[8/7, 9:57 PM] Wr Mallesh G Raj: ನಗು

 
ನೋಡುತ್ತಾ ಬರುತ್ತಿದ್ದೆ
ಅವಳ ನಸುನಗೆಯ!
ಗುಂಡಿಗೆ  ಬಿದ್ದೆ ನೋಡಿ
ಅವಳ ಅಪ್ಪನ ಗುಳಿಕೆನ್ನೆಯ!!!
@ಪ್ರೇಮ್@
[8/7, 9:57 PM] Wr Mallesh G Raj: ಪರೀಕ್ಷೆ

ನೀನೇಕೆ ಮೌನ ಮಹಾ ದೇವನೇ?
ಜನರ ಕಷ್ಟಗಳ ನೀನರಿಯಲಿಲ್ಲವೇ?
ಪ್ರಕೃತಿಯ ಸ್ವಚ್ಛತೆಗೆ ಪಣ ತೊಟ್ಟು ಕಾವನೇ?
ಬೇಕೆಂದೇ ಜನರ ಪರೀಕ್ಷಿಸುವ ಕಾರ್ಯವೇ?
@ಪ್ರೇಮ್@
13.04.2020
[8/7, 9:57 PM] Wr Mallesh G Raj: ಅವ

ಆಹಾ.. ನೋಡಲು 
ಅವನು ಬಲು ಚೆಲುವ!
ಬೆಳೆಸಿಲ್ಲ ಹೃದಯದಲಿ
ಯಾವುದೇ ಒಲವ!
ಮನದಲಿ ಚೂರೂ 
ಇಲ್ಲ ಯಾವುದೇ ಗೆಲುವ!
ಮರೆತಿಹನು ಸಹನೆ
ಶಾಂತಿ ಎಂಬ ಪದವ!
@ಪ್ರೇಮ್@
14.04.2020
[8/7, 9:57 PM] Wr Mallesh G Raj: *ಪದ-ಸಹನೆ*
*ಪ್ರಕಾರ-ಚುಟುಕುಗಳು*

1. *ಆಶಯ*

ತೊಲಗಲಿ ಜಾತಿ ಧರ್ಮದ ಕೋಟೆ
ಮೊಳಗಲಿ ಮನದಲಿ ಸಹನೆಯ ಮೂಟೆ
ನಲಿಯಲಿ ಮಿಡಿಯುವ ಮಾನವ ಹೃದಯವು
ಜನಿಸಲಿ ನವೀನ ಸಮಾನತೆಯ ಮಗುವು!!

2.  *ತಿಳಿವು*

ಹೊರಗಡೆ ಬಾರದೆ ಒಳಗಿರು ಮಾನವ
ಪ್ರಾಣಿಯ ಪಂಜರದಲಿ ಹಾಕುತ ಮೆರೆದವ
ಮನದಲಿ ನಿಜ ಸಹನೆಯು ಮಡುಗಟ್ಟಿರಲಿ
ಜೀವಿಯ ವೇದನೆ ತನಗೂ ತಿಳಿಯಲಿ!

3. *ಪ್ರಾರ್ಥನೆ*

ಪ್ರೀತಿ -ಪ್ರೇಮ -ಶಾಂತಿ -ಸಹನೆ
ಬೆಳೆಯಬೇಕು ನಮ್ಮಲಿ,
ಕ್ರೂರ ದ್ವೇಷ-ಮೋಸ-ವಂಚನೆ
ತೊಲಗಬೇಕು ಮನದಲಿ!!

4. *ಭರವಸೆ*

ಇರಲದು ದೇಶಕೆ ಹಿಮಾಲಯದ ಸಹನೆ
ಬರಲದು ಮಕ್ಕಳ ನಿಷ್ಕಲ್ಮಶ ನಗೆಯು;
ನಗಲದು ಬದುಕು, ನಲಿವಿಗೆ ವಂದನೆ,
ಅಳಲದು ಕೊರೋನ-ಅಟ್ಟಹಾಸದ ನಡೆಯು!

5. *ಅಹವಾಲು*

ಸಹನೆಯು ಬೇಕು ನಮ್ಮಯ ಬದುಕಲಿ
ಸಹವಾಸವಿರುವ ಸರ್ವರ ಮನದಲಿ
ಸರಿಯದೆ ದೂರ ಹರುಷದ ಬಾಳಲಿ
ಸಮಾನತೆ ಬೇಕು ಜನರ ಕಾರ್ಯದಲಿ!

6. *ಕಲಿಯೋಣ*

ದೇಶದ ಯೋಧರ ಹಾಗೆಯೇ ನಾವು
ಜತನದಿ ಕಾಯುವ ತಾಯಿಯ ಸಹನೆಯಲಿ!
ಕಾಣದ ಕೈಗಳ ಕ್ರೂರದ ನೃತ್ಯವು
ಭಾದಿಸದಿರಲಿ ಪ್ರತಿ ಮನೆ- ಮನಗಳಲಿ!!

7.  *ನಮನ*

ನಿನ್ನ ಹಿತವಾದ ಸಹನೆಯ ಕಟ್ಟೆಯನು
ನಾ ಹೇಗೆ ತಾನೇ ಮರೆಯಲಿ?
ತಾಯಿ ಭರತ ಮಾತೆ ನಾನು
ನಿನಗೆ ಏನು ತ್ಯಾಗ ಮಾಡಲಿ?!

8. *ರೈತ*

ದುಡಿಯುವ ರೈತಗೆ ಕಾಯುವ ಸಹನೆ
ಬೆಳೆದ ಬೆಳೆ ಸಿಗಲು ಸಂತಸವು!
ನೀರು ಗೊಬ್ಬರ ಹಾಕಿ ಕಾದೊಡನೆ
ತೆನೆ ಬರಲದು ಹಿತ ಸಂಭ್ರಮವು!

9. *ತಿಳಿ*

ಪ್ರಕೃತಿಯ ಸಹನೆಯು ಮಹಾನ್ ಆಳ
ಅಳತೆ ಮಾಡದಿರು ಎಲೆ ಮಾನವನೇ!
ಗಾಳಿ -ನೀರು -ಬಿಸಿಲು-ಮಳೆಗಾಲ
ನಿನಗಾಗಿಯೆ ತಿಳಿಯೊ ಶತ ದಾನವನೇ!!

10. *ಮಾನವಗೆ*

ಮನೆ ಮನದಲಿ ಕಷ್ಟವು ಎಲ್ಲರಿಗಿರಲು
ನಿಜವನು ತಾ ಉಲಿಯಲು ತೊಂದರೆಯೇ?
ಸಹನೆಯ ತಾಳಲು ಸರ್ವಗೆ ಮನವಿರಲು
ಸಕಲವು ಸಿಗವುದು ಎಂಬುದ ಮರೆಯುವೆಯೇ?
@ಪ್ರೇಮ್@
15.04.2020
[8/7, 9:57 PM] Wr Mallesh G Raj: ನಿನ್ನಿಂದ

ಹಸಿದಿದೆಯೆನ್ನ ಮನ
ಪ್ರೀತಿಯ ಕರೆಗಾಗಿ!
ಕಸಿ ಮಾಡಬೇಡ ಹೃದಯ
ಕುಹಕ ನೋಟವಾಗಿ!
ಮುಸಿ ಮುಸಿ ನಗದಿರೆಂದೂ
ಕಸಿವಿಸಿ ಜೀವಿಯಾಗಿ!
ಬಿಸಿ ಬಿಸಿ ಬಿಸಿರಲೆ ಬೆಂದು
ಬಸವಳಿಯುವಂತಾಗಿ!
@ಪ್ರೇಮ್@
16.04.2020
[8/7, 9:57 PM] Wr Mallesh G Raj: *ಗಜ಼ಲ್*

ಹೊಂಬಣ್ಣದ ನವಿರು ರಶ್ಮಿಯೇ ಅರಿಶಿಣವಾಗಬೇಕು ಸಖೀ//
ಮುಂಜಾನೆ ರವಿ ಕಿತ್ತಲೆ ಬಣ್ಣದ ಮದರಂಗಿ ಹಚ್ಚಬೇಕು ಸಖೀ//

ನೀ ಮೀಯುವ ಜಲದಲಿ ಸುಮ ಸಂಕುಲದ ಘಮವನು ಚೆಲ್ಲುವೆ//
ಹುಣ್ಣಿಮೆ ಬೆಳದಿಂಗಳಿನ ರೇಶಿಮೆ ವಸ್ತ್ರವನು ನೇಯಿಸಬೇಕು ಸಖೀ//

ಆಕಾಶದ ಹಂದರದಿ ವಸುಧೆಯ ಹಸಿರು ಸಿರಿಯ ಮೆತ್ತೆಯಿರಲಿ//
ಹೊಳೆವ ಚುಕ್ಕಿಗಳೆಲ್ಲ ಅಕ್ಷತೆಯಾಗಿ ಆಶೀರ್ವದಿಸಬೇಕು ಸಖೀ//

ಮುಂಗಾರಿನ ಮುತ್ತಿನ ಹನಿ ಸಿಂಚನದ ಗಂಧವಿರುವುದು//
ಮಿಂಚಿನ ಬೆಳಕಿನಲಿ ಗುಡುಗು
ವಾದ್ಯವ ನುಡಿಸಬೇಕು ಸಖೀ//

ಸುಧೆಯ ಮೊಗದಲಿ ನಗುವಿನ ಆಭರಣವೊಂದೇ ಸಾಕು//
ಕವಿತೆಗಳ ಹೂಮಾಲೆ ಹಾಕಿ ನಾ ನಿನ್ನನು ವರಿಸಬೇಕು ಸಖೀ//


*ಅಮರ ಪ್ರೇಮಿಯ ಕನಸು*

*ಸುಧಾ ಎನ್. ತೇಲ್ಕರ್* ಅಮ್ಮನವರ ಗಝಲ್ ಒಂದನ್ನು ವಿಮರ್ಶೆಗಾಗಿ ಆಯ್ದುಕೊಂಡಿರುವೆ.

 ಗಝಲ್ ನನ್ನಿಷ್ಟದ ಕವನ ಪ್ರಕಾರ. ಅಂತೆಯೇ ಭಾವ ಪರವಶ ಗಝಲ್ ನನ್ನ ಮನನೆಚ್ಚಿತು. ಬಳಗದ ಉತ್ತಮ ಕವಿಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಸುಧಾ ಅಮ್ಮನವರ ಬರಹದ ಶೈಲಿಯೇ ಅದ್ಭುತ. ಅಂತಹ ಕವಿಯ ಪ್ರತಿ ಕವನವೂ ಓದುಗರಿಗೆ ರಸದೂಟ
 
ಪ್ರೇಮಿಯೊಬ್ಬ ತನ್ನ ಗೆಳತಿಗೆ ಬಯಸಿವ ಪ್ರೀತಿಯ ಪರಿಧಿ ಅಗಾಧ. ತನ್ನ ಸಖಿಗೆ ತಾನೇನೆಲ್ಲಾ ಮಾಡಬೇಕೆಂಬ ಕನಸು ಕಾಣುವವರಿಗೆ ಇದೊಂದು ಮಾದರಿ ಗಝಲ್. 

 ತಾನು ಮೆಚ್ಚಿದ ಹೆಣ್ಣಿಗೆ ತಾರೆಗಳನ್ನೇ ತಂದು ಅಕ್ಷತ್ ಹಾಕುವ ಪರಿ ಕವಿ ಭಾವದ ಮೇಲ್ಪಂಕ್ತಿಗೆ ಸಾಕ್ಷಿಯಾಗಿದೆ. ಆಕಾಶದ ಸೂರ್ಯ ರಶ್ಮಿಯ ಅರಶಿನ ಬಣ್ಣವನ್ನೇ ತನ್ನವಳಿಗೆ ಹಚ್ಚಬೇಕು.ಮುಂಜಾನೆ ರವಿಯ ಕಿತ್ತಳೆ ಬಣ್ಣವೇ ಅವಳ ಕೈಗೆ ಮೆಹಂದಿಯಾಗಬೇಕು. ಆಹಾ ಭವ್ಯ ಬದುಕನ್ನು ನೇಸರಕ್ಕೆ ಹೋಲಿಸಿದ ರೂಪಕ ಅಮೋಘ!

ಹುಣ್ಣಿಮೆ ಬೆಳದಿಂಗಲೇ ರೇಶ್ಮೆ ವಸ್ತ್ರವಾಗಿ, ಪ್ರಪಂಚದ ಪುಷ್ಪವೆಲ್ಲ ಅವಳ ಸ್ನಾನದ ನೀರಿನ ಸುಗಂಧಕ್ಕಾಗಿ ಬಳಕೆಯಾಗಬೇಕು! ರೂಪಕ
ಮನಸ್ಸಿಗೆ ಚಿತ್ರಕವನವನ್ನೇ ಕಟ್ಟಿಕೊಡುತ್ತದೆ!

ಬುವಿಯ ಹಸಿರು ಸಿರಿ ಪಲ್ಲಂಗವಾಗಿ ಆಗಸದಲ್ಲಿ ಮೆತ್ತನೆ ಮಲಗುವ ಕನಸು! ವಾವ್.. ಅದ್ಭುತ ಭಾವ!

ಮುಂಗಾರು ಮಳೆ ಹನಿಗಳು ಮುತ್ತುಗಳಾಗಿ ಅಮೃತ ಸಿಂಚನವಾಗಬೇಕು. ಅಲ್ಲಿ ಗುಡುಗು ಸಿಡಿಲುಗಳೇ ವಾದ್ಯಘೋಷಗಳು! ಇವು ನಮ್ಮ ಮನದಲ್ಲಿ ಒಂದು ಛಾಪೊತ್ತಿ ಕನಸು ಕಾಣುವಂತೆ ಮಾಡಲಾರವೇ?

"ಮೊಗದಲಿ ನಗುವೊಂದೇ ಸಾಕು!" ಇಷ್ಟೆಲ್ಲಾ ಮೇಲೇರಿದ ಗಝಲ್ ಕೊನೆಯಲಿ ಆಗಸದಿಂದ ಭೂಮಿಗಿಳಿದು ನೈಜತೆಯನ್ನು ಸಾರುತ್ತದೆ. ತನ್ನವಳ ಮೊಗದಲಿ ನಾನು ಬಯಸುವುದು ಕೇವಲ ನಗುವನ್ನು ಮಾತ್ರ! ಅಂದರೆ ತಾನು ಅವಳನ್ನು ಸಂತಸವಾಗಿ ಇರಿಸಬೇಕು! ಅದಕ್ಕಾಗಿ ನಾನು ಪ್ರಿಯೆಯನ್ನು ಹೇಗೆ ವರಿಸಬೇಕೆನ್ನುವಲ್ಲಿ ಒಳಗಿನ ಕವಿತ್ವ ಹೊರಗೆ ಬಂದಿದೆ! ಕವಿತೆಗಳ ಹಾರದಲಿ ನಾನವಳ ವರಿಸಬೇಕು! ಆಹಾ..ರೂಪಕವೇ! ಕವಿತೆಯನು ಆಶ್ವಾದಿಸಬಲ್ಲ ಮನಕ್ಕೆ ಬೇರೆ ಬೇಕೇ? 
    
   ವಾವ್, ಓದುಗನಿಗೊಂದು ಹಬ್ಬ ಈ ಗಝಲ್. ಪೂರ್ತಿ ಓದಿದ ಬಳಿಕ ಒಂದು ಸುಂದರ ಪ್ರಣಯದ ಸಿನೆಮಾ ನೋಡಿದ ಅನುಭವ ಕೊಡುವ ಗಝಲ್. I simply loved it!
@ಪ್ರೇಮ್@
15.04.2020@prem@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ