ಹೆಸರು-ಪ್ರೇಮಾ ಉದಯ್ ಕುಮಾರ್
ದಿನಾಂಕ 10.12.1980 ರಲ್ಲಿ ದಿ. ಶ್ರೀಯುತ ರಮೇಶ್ ಶೆಟ್ಟಿ ಮತ್ತು ಶ್ರೀಮತಿ ಗುಲಾಬಿ ಶೆಟ್ಟಿ ಇವರಿಗೆ ಮೊದಲನೆ ಮಗಳಾಗಿ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜನನ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಈದು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ಪಡೆದು,
ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸ.ಪ.ಪೂ.ಕಾಲೇಜು, ಕುದುರೆಮುಖ ಚಿಕ್ಕಮಗಳೂರು ಜಿಲ್ಲೆ ಇಲ್ಲಿ.
ಮುಂದೆ ಕಾಲೇಜು ಶಿಕ್ಷಣ ವಿಜ್ಞಾನ ವಿಷಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಇಲ್ಲಿ ನಡೆಯಿತು. ತದನಂತರ ಮೈಸೂರಿನ ಮಹಾರಾಣಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಟಿ.ಸಿ.ಹೆಚ್ ಟ್ರೈನಿಂಗ್ ಪಡೆದು ದೀಪಾ ಶಿಕ್ಷಣ ಸಂಸ್ಥೆ ದೀಪಾನಗರ ಮೈಸೂರು ಇಲ್ಲಿ ವೃತ್ತಿ ಜೀವನ ಪ್ರಾರಂಭ.
ತದನಂತರ 2004 ರ ಮಾರ್ಚ್ 10 ರಂದು ಸ.ಹಿ.ಪ್ರಾ.ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ದ.ಕ ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರಲ್ಪಟ್ಟು, ಅಲ್ಲೇ ನಮ್ಮ ಬಂಟ್ವಾಳ ವಾರ ಪತ್ರಿಕೆಯಲ್ಲಿ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ " ಅಂಕಣ ಬರಹ ಪ್ರಾರಂಭ.
ಇಂದಿರಾಗಾಂಧಿ ಮುಕ್ತ ವಿಶ್ವ ವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಬಿ.ಎ, ಆಂಗ್ಲ ಭಾಷಾ ಭೋಧನಾ ಸರ್ಟಿಫಿಕೇಟ್, ಹಾಗೂ ಬಿ. ಎಡ್ ಪದವಿ ಪಡೆದ ಬಳಿಕ
ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪ್ರಥಮ ಶ್ರೇಣಿಯಲ್ಲಿ ಪೂರ್ಣ.
2011ರಲ್ಲಿ ಸ.ಪ.ಪೂ.ಕಾಲೇಜು ಐವರ್ನಾಡು ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಇದುವರೆಗೆ ವೃತ್ತಿ ಬದುಕಿನ ಹದಿನೈದು ವರುಷಗಳನ್ನು ಪೂರೈಸಿದ ಸಂತಸ.
2011ರಲ್ಲಿ ಉದಯ್ ಕುಮಾರ್ ರವರೊಡನೆ ದಾಂಪತ್ಯ ಜೀವನ ಪ್ರಾರಂಭ. ದಿಯಾ ಉದಯ್ ಎಂಬ ಹೆಸರಿನ ಆರು ವರುಷದ ಮಗಳಿದ್ದಾಳೆ.
ಪ್ರಸ್ತುತ ಅದೇ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಸುಳ್ಯ,ದ.ಕ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಭಾಷಾ ಬೋಧನೆ . ಎಂಟು ವರುಷಗಳಿಂದ ಶೇ. 90 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿ ವರ್ಷ ಆಂಗ್ಲ ಭಾಷೆಯಲ್ಲಿ ಉತ್ತೀರ್ಣತೆಯ ಸಾಧನೆ.
2016-17ರಲ್ಲಿ ಶೇ. 100 ಆಂಗ್ಲ ಭಾಷೆಯಲ್ಲಿ ಫಲಿತಾಂಶದ ಸಾಧನೆ.
ಕಾವ್ಯನಾಮ-@ಪ್ರೇಮ್@
3 ವರುಷಗಳಿಂದ ನಮ್ಮ ಬಂಟ್ವಾಳ ವಾರಪತ್ರಿಕೆಯಲ್ಲಿ,ಹಾಗೂ 51 ವಾರಗಳಿಂದ ಅದೇ ಹೆಸರಿನ ಇ ಪತ್ರಿಕೆಯಲ್ಲಿ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಎಂಬ ಸಾಮಾಜಿಕ ಕಳಕಳಿಯ ಅಂಕಣ ಬರಹ ಬರೆಯುತ್ತಿರುವೆ.
15 ವಾರಗಳು ಅದೇ ಪತ್ರಿಕೆಯಲ್ಲಿ "ಸ್ತ್ರೀ ಶಕ್ತಿ, ದೇಶಕ್ಕೆ ಮುಕ್ತಿ" ಎಂಬ ಅಂಕಣ ಬರಹ ಪ್ರಕಟವಾಗಿದೆ.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಹೆಮ್ಮೆಯಿದೆ. ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಕತೆ, ಕವನ ಹಾಗೂ ಬರವಣಿಗೆಯ ವಿವಿಧ ಮಜಲುಗಳಲ್ಲಿ ಬರೆಯಲು ಪ್ರೋತ್ಸಾಹಿಸಿದ ಪರಿಣಾಮವಾಗಿ ನಾನೂ ಸಹ ಸಂಪಾದಕಳಾಗಿದ್ದ ನಮ್ಮ ಶಾಲಾ ವಾರ್ಷಿಕ ಹಸ್ತಪ್ರತಿ ಸಂಚಿಕೆ "ಐಸಿರಿ" ಗೆ ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಹಸ್ತಪ್ರತಿ ಸಂಚಿಕೆ ಸ್ಪರ್ಧೆಯಲ್ಲಿ ಸತತ ಮೂರು ಬಾರಿ ಪ್ರಥಮ ಬಹುಮಾನ ಲಭಿಸಿದೆ.
2019ರ ರಾಜ್ಯ ಮಟ್ಟದ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನ ಮನುಬಳಿಗಾರ್ ರವರ ನೇತೃತ್ವದಲ್ಲಿ, ಸುಧಾ ಮೂರ್ತಿಯವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನಲ್ಲಿ ನಡೆದಾಗ ಅದರ ಒಂದು ಗೋಷ್ಟಿ "ಕನ್ನಡ ಸಾಹಿತ್ಯ ಮಹಿಳಾ ನೋಟ" ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟಿರುವೆ.
ಹವ್ಯಾಸ-ಗೀಚುವುದು, ಓದುವುದು, ಬರವಣಿಗೆ, ಟೈಲರಿಂಗ್,ಎಂಬ್ರಾಯಿಡರಿ, ಹಾಡುವುದು, ಬರಹ, ಹಾಡು ಕೇಳುವುದು.ಮೋಟಿವೇಶನ್.
ಕೃತಿ ಪ್ರಕಟಣೆ- ಭಾವ ಜೀವದ ಯಾನ
ಕವನ ಸಂಕಲನ. 2019 ಜನವರಿ 18ಕ್ಕೆ ಚಿಕ್ಕಮಗಳೂರು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ , ಮೂಡಿಗೆರೆಯಲ್ಲಿ ಬಿಡುಗಡೆ.
ಹಲವಾರು ಸಂಪಾದಿತ ಕವನ, ಕಥಾ ಸಂಕಲನಗಳಲ್ಲಿ ಕತೆ,ಕವನ ಪ್ರಕಟಗೊಂಡಿದೆ.
ನೈಋತ್ಯ, ಪಂಜು, ವಿಶ್ವವಾಣಿ ಮೊದಲಾದ ಪತ್ರಿಕೆಗಳಲ್ಲಿ, ಹಲವಾರು ಸಂಘ ಸಂಸ್ಥೆಗಳ ವಾರ್ಷಿಕ ಸಂಚಿಕೆಗಳಲ್ಲಿ ಲಘುಬರಹ, ಲೇಖನ, ಕವನಗಳು ಪ್ರಕಟಗೊಂಡಿವೆ.
ಪ್ರೇಮ್ಸ್ ಲಿಟರೇಚರ್ ಎಂಬ ಬ್ಲಾಗ್ ನಲ್ಲಿ 900ಕ್ಕೂ ಹೆಚ್ಚು ಕವನ, ಅಂಕಣ ಬರಹ, ಕತೆ, ಗಝಲ್,ನ್ಯಾನೋಕತೆ, ವಿಮರ್ಶೆಗಳು, ಬರವಣಿಗೆಗಳು ತುಳು, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿವೆ.
ಪ್ರತಿಲಿಪಿ, ವರ್ಡ್ ಪ್ರೆಸ್, ಕನ್ನಡ ಪೋಯಮ್ಸ್ ಆ್ಯಪ್ ಗಳಲ್ಲಿ ಕತೆ, ಕವನಗಳು ಪ್ರಕಟಗೊಳ್ಳುತ್ತಿವೆ.
15-20 ರಾಜ್ಯ, ಅಂತರರಾಜ್ಯ, ಜಿಲ್ಲಾ ಕವಿಗೋಷ್ಠಿ, ಆಂಗ್ಲ ಭಾಷಾ ತರಗತಿಗಳಲ್ಲಿ ಭಾಗವಹಿಸಿದ ಅನುಭವ.
ಉತ್ತರಾಕಾಂಡ ರಾಜ್ಯದಲ್ಲಿ ಸಿಸಿಆರ್ಟಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದಾಗ ಮತ್ತು ಕೇರಳದ ಅರಿಕೋಡ್ ನಲ್ಲಿ ಎದು ಫೆಸ್ಟ್ ನಲ್ಲಿ ಮತ್ತು ಕೊಡಗಿನ ಪೆರಾಜೆ ಶಾಲೆಯಲ್ಲಿ ನಡೆದ ಸಿಸಿಆರ್ ಟಿ ಎದುಫೆಸ್ಟ್ ನಲ್ಲಿ ಆಂಗ್ಲ ಭಾಷಾ ವಿಶೇಷ ತರಗತಿಗೆ ಸನ್ಮಾನಿತ.
ಪ್ರಶಸ್ತಿಗಳು-ಕಾವ್ಯ ರತ್ನ, ಕನ್ನಡ ಸೇವಾ ರತ್ನ.
ವಿಳಾಸ- ಸ.ಪ.ಪೂ.ಕಾಲೇಜು ಐವರ್ನಾಡು, ಸುಳ್ಯ, ದ.ಕ ೫೭೪೨೩೯
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ