ಬಂತೆ ಸ್ವಾತಂತ್ರ್ಯ
ಹೆಣ್ಣಿಗೆ ನಿರಾಳವಾಗಿ ಅರ್ಧ ರಾತ್ರಿಯಲು
ಓಡಾಡಲು ಬಂತೇ ಸ್ವಾತಂತ್ರ್ಯ?
ಗಂಡಿನ ದೃಷ್ಟಿಗೆ ಬೀಳದೆ ಇರಲು
ಬಂತೇ ಮಹಿಳೆಗೆ ಸ್ವಾತಂತ್ರ್ಯ?
ತನ್ನ ಪ್ರೀತಿಯ ವಿಷಯ ಕಲಿಯಲು
ಬಂತೇ ಮಗುವಿಗೆ ಸ್ವಾತಂತ್ರ್ಯ?
ಅನಾಚಾರದ ದಂಧೆಯಿಲ್ಲದೆ ರಾಜ್ಯವನಾಳಲು
ಬಂತೇ ಮಂತ್ರಿಗೆ ಸ್ವಾತಂತ್ರ್ಯ?
ಪ್ರಜೆಗಳಿಗೆಲ್ಲ ನ್ಯಾಯವ ಕೊಡಲು
ಬಂತೇ ಭಾರತಕೆ ಸ್ವಾತಂತ್ರ್ಯ?
ಬಡವರ ಒಡಲನು ತುಂಬಿಸಿ ಬಿಡಲು
ಬಂತೇ ದೇಶಕೆ ಸ್ವಾತಂತ್ರ್ಯ?
ದುಡಿದು ಬದುಕುತ ತಾನಾಗೆ ಇರಲು
ಸಿಕ್ಕಿತೆ ಬಡವಗೆ ಸ್ವಾತಂತ್ರ್ಯ?
ಲಂಚವ ಕೊಡದೆ ಕೆಲಸವು ಆಗಲು
ಬಂದಿತೆ ಜನರಿಗೆ ಸ್ವಾತಂತ್ರ್ಯ?
ಮಾತಾಪಿತರನು ಆಶ್ರಮಕಟ್ಟಲು
ದೊರಕಿತೇ ಮಕ್ಕಳಿಗೆ ಸ್ವಾತಂತ್ರ್ಯ?
ಲಕ್ಷಗಟ್ಟಲೆ ಸಂಬಳಕೆ ಪರವೂರಲಿ ದುಡಿಯಲು
ಮನೆಯಲಿ ಹಿರಿಯ ಜೀವಗಳಿಗೆ ಸ್ವಾತಂತ್ರ್ಯ!
@ಪ್ರೇಮ್@
08.08.2020@prem@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ