ಸೋಮವಾರ, ಜನವರಿ 4, 2021

ಗ ಕಾರ

ಗಕಾರ

ಗಲಾಟೆ ಬೇಡವೊ ಗಣೇಶ ನಿನ್ನದು
ಗಾಡಿಯು ಬೇಕು ಅಮ್ಮಾ ನನಗೆ
ಗಿಳಿಯನು ಕೊಡುವೆನು ಮಗನೇ ನಿನಗೆ
ಗೀಚಲು ಪೆನ್ನು ಕಾಗದ ಬೇಕಮ್ಮಾ

ಗುಲಾಬಿಯ ಕೊಡುವೆನು ಪುಟ್ಟನೆ ನಿನಗೆ
ಗೂಡಲಿ ಕೂರುವ ಹಕ್ಕಿಯು ಬೇಕು
ಗೃಹದಲೆ ಸಾಕುವ ಪಕ್ಷಿಯ ತರಲೇ
ಗೆಲುವಿನ ಹಾದಿಯಲೆ ಸಾಗು ನೀ ಮಗನೆ

ಗೇಲಿಯ ಮಾಡೆನು ಗೆಳೆಯರ ಜೊತೆಗೆ
ಗೈರು ಹಾಜರಿ ಬೇಡವು ಶಾಲೆಗೆ
ಗೊಂದಲ ಮಾಡದೆ ಬದುಕಲು ಕಲಿ ನೀ
ಗೋಲಿಯ ಆಡಲು ಬೇಕದು ನನಗೆ

ಗೌರಿಯ ಕಂದನೆ ನೀ ಬಾ ಬಳಿಗೆ
ಗಂಧವ ಹಚ್ಚುವೆ ನಿನ್ನಾ ಮೈಗೆ
ಗಃ ಓಡಿದ ಆಟದ ಬಯಲಿಗೆ..
@ಪ್ರೇಮ್@
05.01.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ