ಶುಕ್ರವಾರ, ಜನವರಿ 1, 2021

ರಾಷ್ಟ್ರ ನಮನ


ರಾಷ್ಟ್ರ ನಮನ

ನಮಿಸುವೆ ತಾಯಿ ಭಾರತಿಗೆ
ಸ್ಮರಿಸುವೆ ಬದುಕಿನ ಅರೆಘಳಿಗೆ
ಬಾಗುವೆ ಚರಣಕೆ ಅಡಿಗಡಿಗೆ
ಬೀಗುವೆ ನಿನ್ನಯ ಜೊತೆಜೊತೆಗೆ...//

ಹಿಮಾಲಯ ತಲೆಯಲಿ ತಂಪನ್ನೀಯಲು
ಹಿಂದೂ ಸಾಗರ ಕಾಲನು ತೊಳೆಯಲು
ಸರ್ವ ಸಂಸ್ಕೃತಿಯ ಹೊತ್ತ ನೆಲೆವೀಡು.
ವಿಧ ವಿಧ ಭಾಷೆಯ ಸಂಪತ್ತಿನ ಗೂಡು...//

ಹಸಿರಿನ ಐಸಿರಿ  ವಿಂದ್ಯಾ ಆರಾವಳಿ
ಪಶ್ಚಿಮ ಘಟ್ಟದ ಅಂದದ ನಡಾವಳಿ
ಗಂಗಾ ಯಮುನಾ  ಕೃಷ್ಣಾ ಕಾವೇರಿ
ವೈವಿಧ್ಯತೆಯ ಜನವದು ತರಹೇವಾರಿ.//

ವಿವಿಧ ಮತ ಧರ್ಮಗಳ ಕೂಡು
ಹಲವು ಸಂಸ್ಕೃತಿಗಳ ನೆಲೆವೀಡು
ಜಾಣ ಕವಿ ಪುಂಗವರನು ನೋಡು
ವಿಜ್ಞಾನಿ ವೈದ್ಯ ಒಳ್ಳೆ ಮನಗಳ ನಾಡು..//

ಹಾಡೋಣ ರಾಷ್ಟ್ರ ನಮನದ ಕವನವ
ಬೆಳೆಸುವ ದೇಶದಿ ಹಸಿರಿನ ವನವ
ಧೈರ್ಯದಿ ಬಾಳನು ನಡೆಸುವ ಮನವ
ಮಾಡುತ ರಾಷ್ಟ್ರವು ಮೆಚ್ಚುವ ಕಾರ್ಯವ//
@ಪ್ರೇಮ್@
19.07.2020
9901327499



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ