ಶುಕ್ರವಾರ, ಜನವರಿ 1, 2021

ಮದುವೆ ಶಾಯರಿಗಳು

[12/13/2020, 7:29 PM] @PREM@: ಮನವು ಮಲ್ಲಿಗೆಯಂತೆ
ನಡೆಯು ಹಂಸದಂತೆ
ನಾಸಿಕ ಸಂಪಿಗೆಯಂತೆ
ಹುಡುಗ ಬಂದಾಗ ಕತ್ತು ಕೆಳಗಂತೆ...
@ಪ್ರೇಮ್@
[12/13/2020, 7:30 PM] @PREM@: ನಡೆಯಲ್ಲಿ ಗಜಗಮನೆ
ಮಯ್ಯಾರದಲ್ಲಿ ಮಂದಗಮನೆ
ನುಡಿಯಲ್ಲಿ ಗರುಡಗಮನೆ
ಸೇರಲಿರುವಳು ಗಂಡನ ಮನೆ
@ಪ್ರೇಮ್@
[12/13/2020, 7:31 PM] @PREM@: ಸೋನಾ ಹೇ ತೋ ಸೋನೇ ಕೇ ಜೈಸೇ ಚಮಕೋ
ಚಾಂದಿ ಹೇ ತೋ ಚಾಂದಿ ಕೇ ಜೈಸೆ ಚಮಕೋ
ಸಸುರಾಲ್ ಮೇ ಸಬ್ ಸೇ ಜ್ಯಾದಾ ಅಚ್ಚೇ ಗುಣ್ ಸೇ ಚಮ್ ಕೋ
@ಪ್ರೇಮ್@
[12/13/2020, 7:33 PM] @PREM@: ನೀ ಮುಡಿದ ಮಲ್ಲಿಗೆ ಬಾಡದಿರಲಿ ಮಗಳೇ
ತಾಳಿ ಭಾಗ್ಯವು ನಿನಗೆ ಸಕಲ ಕಾಲವಿರಲಿ ಮಗಳೇ
ಗಂಡನಿರುವನು ಜೊತೆಯಲ್ಲಿಯೇ ಎಂದಾದರೂ
ಬಂದೀತು ಮನೆಯೊಳಗೆ ಜಿರಲೆ
ಹೆದರಿ ಓಡದಿರು ಮಗಳೇ.
@ಪ್ರೇಮ್@
[12/13/2020, 7:34 PM] @PREM@: ರಂಗು ರಂಗಿ ಬಟ್ಟೆಯಲಿ ಮಿಂಚುತಿರುವಳು ಮದುಮಗಳು
ಅವಳಂತೆಯೇ ಅಂದದಲಿ ಮಿಂಚುತಿರುವರು ಅವಳ ಗೆಳತಿಯರ ಸಾಲುಗಳು
ಯಾರಿಗೆ ಗೊತ್ತು ಇಲ್ಲಿ ಗಾಳಕ್ಕೆ ಬೀಳಬಹುದೇನೋ
ಹಲವು ಮೀನುಗಳು..
@ಪ್ರೇಮ್@
[12/13/2020, 7:36 PM] @PREM@: ನಿನ್ನ ಕಣ್ಣುಗಳು
ಕಲ್ಲಿನ ದಿಬ್ಬಗಳು
ನಿನ್ನ ಹಲ್ಲುಗಳು
ನದಿಯ ಕಲ್ಲುಗಳು
ಕಣ್ಣ ರೆಪ್ಪೆಗಳು
ಹಾರೋ ಕಪ್ಪೆಗಳು
ಆದರೂ ನೀನೆನಗೆ ಸುಂದರಿಯೇ
ಏಕೆಂದರೆ ನೀ ನನ್ನವಳು..
@ಪ್ರೇಮ್@
[12/13/2020, 7:38 PM] @PREM@: ಬಳ್ಳಿಯಿಂದ ಮೊಗ್ಗು ಬೆಳೆದು ಹೊರಗೆ ಬಂದು ನಗುತಿದೆ
ಹೂವು ಆಗಿ ಬಿರಿದು ಜನರ ಸಂತಸದಿ ಬೆಸೆದಿದೆ
ಎರಡು ಕುಟುಂಬ ಸೇರಿ ಹೋಗಿ ಸುಗ್ಗಿಯಂತೆ ನಲಿದಿದೆ..
ಆಚೆ ಈಚೆಯವರ ದೃಷ್ಟಿ ಇಲ್ಲಿಯೇ ಬಿದ್ದಂತಿದೆ..
@ಪ್ರೇಮ್@
[12/13/2020, 7:39 PM] @PREM@: ಬಾಳು ಬೆಳಗಲಿ ಚಂದಿರನಂತೆ
ಸರ್ವರಿಗೆ ಬೆಳಕಾಗಿರಲಿ ಸೂರ್ಯನಂತೆ
ತಾನುರಿಯಲಿ ಸದಾ ಮಿಂಚುಹುಳದಂತೆ
ಕರಗದಿರಲಿ ಎಂದೂ ಮೇಣದ ಬತ್ತಿಯಂತೆ..
@ಪ್ರೇಮ್@
[12/13/2020, 7:40 PM] @PREM@: ತವರು ಮನೆಯ ನೆನೆಯೆ ಮಗಳೆ ಎಂದಿಗೂ
ತಂದೆ ತಾಯ ಕಷ್ಟ ಮರೆಯ ಬೇಡವೆಂದಿಗೂ
ಗಂಡನಿಗೆ ಮೋಸ ಮಾಡ ಬೇಡವೆಂದಿಗೂ
ಬಾಯ್ ಫ್ರೆಂಡಿನ ಸಹವಾಸ ಬರದೆ ಇರಲಿ ಎಂದಿಗೂ..
@ಪ್ರೇಮ್@
[12/13/2020, 7:42 PM] @PREM@: ಕಾಮುಕನಾಗದಿರು ಗೆಳೆಯ, ಪತ್ನಿಯ ಗೌರವಿಸು
ಸತಿಪತಿಯೊಂದಾಗಿ ಮಾಡುವ ಪೂಜೆಯ ನಿತ್ಯವೂ ನೀ ನಡೆಸು
ದೇವನ ಭಕ್ತಿಯ ಪೂಜೆಯ ಫಲವನು ನಿತ್ಯ ಅನುಭವಿಸು
ಪತ್ನಿಯ ಲಕ್ಷ್ಮಿಯಂತೆ ನೀ ಗುರುತಿಸು..ಕಣ್ಣೀರೊರೆಸು.
@ಪ್ರೇಮ್@
[12/13/2020, 7:43 PM] @PREM@: ತವರ ತೊರೆದು ಜೊತೆಗೆ ಬಂದ
ಹೆಣ್ಣ ಬಾಳಾಗಲಿ ಸದಾ ಅಂದ
ಗಂಡು ಹೆಣ್ಣು ಜೊತೆ ಜೊತೆಯಾಗಿ
ಹೊರಡುವಾಗ ಏನೊ ಚಂದ
ಪೋಷಕರಿಗೆ ಮನಕಾನಂದ.
@ಪ್ರೇಮ್@
[12/13/2020, 7:44 PM] @PREM@: ಬಹಳ ಅಂದ ನೀನು ಚೆಲುವೆ
ನನ್ನ ಬಳಿ ಬಾರೆ ಒಲವೆ
ನಿನ್ನ ಇರವು ನನಗೆ ಗೆಲುವೆ
ನಿನ್ನ ಜೊತೆಗೆ ನಾನೆಲ್ಲ ಮರೆವೆ..
@ಪ್ರೇಮ್@
[12/13/2020, 7:45 PM] @PREM@: ಬದುಕೆಂಬ ನಾವೆಯನು ಜೊತೆಯಲಿ ನೃೆಸುವ
ಬಾಳೆಂಬ ರಥವನು ಒಟ್ಟಾಗಿ ಎಳೆಯುವ
ಕ್ಷಣವೆಂಬ ಯುಗವನು ಸಂತಸದಿ ಕಳೆಯುವ..
@ಪ್ರೇಮ್@
13.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ