ಹನಿಗಳು
1.
ಅಪ್ಪ ಅಮ್ಮರ ಜಗಳ
ಮಕ್ಕಳೆಲ್ಲರ ರಗಳೆ
ಕೇಳುವವರಾರೋ
ನಾ ತಿಳಿಯೆ ಮಗಳೆ!!
2.
ಟೆನಿಸ್ ಕ್ರಿಕೆಟ್ ಬ್ರಿಟಿಷರೊಡನೆ
ಭಾರತಕ್ಕೆ ಬಂದವು!
ಲಗೋರಿ, ಚಿನ್ನಿದಾಂಡು
ದೇಶ ಮರೆತು ಹೋದವು!
3.
ಕೊರೋನ ಪ್ರಪಂಚಕೆ ಬಂತು
ಮನೆಯೊಳಗೆ ಸರ್ವ ಜನರೆಲ್ಲ
ಕುಳಿತುಕೊಳ್ಳುವಂತೆ ಮಾಡಿತು
ಆದರೆ ಸೋಮಾರಿಗಳಾಗಿ ಅಲ್ಲ!
4.
ಅಂದು ನೋಡಿದೆ ಅವನ
ನಮ್ಮೂರ ಜಾತ್ರೆಯಲಿ
ಇಂದು ಅವನಿಹನು
ಸದಾ ನನ್ನ ಬಳಿಯಲಿ..
5.
ಆಕಳು ಕಪ್ಪು
ಹಾಲು ಕಪ್ಪಾಗಲಿಲ್ಲ!
ಪಡೆದ ಕಪ್ಪು ಹಣ
ಬೆಳ್ಳಗಾಗಲೇ ಇಲ್ಲ!!!
@ಪ್ರೇಮ್@
01.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ