ಹನಿಗವನಗಳು
1. ಬಾಡಿಗೆ
ನೋಡುತ್ತಾ ಕುಳಿತಿದ್ದೆ
ಅವಳ ಕಣ್ಣಿನ ಕಾಡಿಗೆ!
ಮರೆತೇ ಹೋಯ್ತು ಕಟ್ಟಲು
ಮನೆಯ ತಿಂಗಳ ಬಾಡಿಗೆ!
ನೋಡುತ್ತಲೇ ಇದ್ದೆ ನಾನು
ಅವಳ ಅಂದದ ನಡಿಗೆ!
ಮರೆತು ಬಿಡುವಳು ಅವಳು
ಅಂದುಕೊಂಡೆ ಕೇಳಲು ಅಡಿಗಡಿಗೆ!
ಬಿಡುವಳೇ ಓನರ್ ಮಗಳು
ಪ್ರತಿ ತಿಂಗಳ ಒಟ್ಟು ಬಾಡಿಗೆ!
2. ಕವನ
ನನ್ನ ಬಳಿ ಬಂತು
ಪದಗಳ ಮೂಟೆ ತಂತು
ಒಟ್ಟು ಸೇರಿಸಲು ಹೇಳಿತು
ಸಾಲುಗಳಲಿ ಕುಳಿತಿತು
ಹೊಸ ಅರ್ಥವ ಹೇಳಿತು
ಅದೇ ನನ್ನ ಕವನವಾಯಿತು..
3. ಅಮ್ಮ
ನನ್ನ ಕೇಳಿ ಪಡೆದಳು
ಸಂತಸದಿ ಹೊತ್ತು ನಡೆದಳು
ನೋವಿನಲ್ಲು ನಕ್ಕಳು
ಹೆತ್ತು ಸಾಕಿ ಸಲಹಿದಳು
ಬುದ್ಧಿ ಕಲಿಸಿ ಮೆರೆದಳು
ವಿದ್ಯೆ ಕಲಿಸಿ ಬೆಳೆಸಿದಳು
ಮಗುವಿನಂತೆ ಹರಸಿದಳು..
4. ಪೆನ್ನು
ಬರೆಯಲೆನಗೆ ನೀನು ಬೇಕು
ಮನದ ಭಾವ ಹರಿಯಬೇಕು
ಲೇಖನಿಯೆಂಬ ಹೆಸರು ಸಾಕು
ಖಡ್ಗಕಿಂತ ಹರಿತ ಬೇಕು
ನೇರಾ ನೇರ ಹೇಳಬೇಕು
ಸಮಾಜ ತಿದ್ದೊ ಕಾರ್ಯ
ನಿನ್ನಿಂದಾಗ ಬೇಕು..
5. ನಾಯಿ
ಅನ್ನ ಹಾಕಿದವನ ನಾನು
ಮರೆಯದಿರುವೆನು
ಕನ್ನ ಹಾಕದಂತೆ ಕಳ್ಳ
ಕಾಯುತಿರುವೆನು
ಪರ ಜನರು ಮನೆಗೆ ನುಗ್ಗದಂತೆ
ತಡೆಯುತಿರುವೆನು
ಮಕ್ಕಳೊಡನೆ ಪ್ರೀತಿಯಿಂದ
ಆಟವಾಡುತಿರುವೆನು..
@ಪ್ರೇಮ್@
01.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ