ಶ್ರೀಕೃಷ್ಣ
ಜೈ ಜೈ ಮುರಾರಿ ಜಯಹರಿ ಮುರಾರಿ
ಕಂಸನ ಕೊಂದ ನಾಯಕ ಶ್ರೀಹರಿ..
ರಾಧೆಯ ಕೃಷ್ಣ ಗೋಪಿಯ ಲೋಲ
ಯಶೋದೆ ಕಂದ ಬಾಲ ಗೋಪಾಲ
ನಂದನ ಮುಕುಂದ ಜೈಕಾರ ಕೇಳು
ನೂರಾರು ಅವತಾರ ನೀನೇ ತಾಳು..
ಕಾಳಿಂಗ ಮರ್ಧನ ನಡೆಸಿದ ಪೋರ
ಅಸುರರ ಕೊಂದ ಧೀಮಂತ ಚೋರ..
ಬೆಣ್ಣೆಯ ತಿನ್ನುವ ಭಾರೀ ವಯ್ಯಾರ
ಗೋಪಿಕೆಯರ ಸೀರೆ ಕದಿಯುವ ಮಾರ..
ದೇವಕಿ ನಂದನ ಹಣೆಯಲಿ ಚಂದನ
ಬಿಡಿಸುವೆ ನೀನು ಸರ್ವರ ಬಂಧನ
ಲೋಕೋದ್ಧಾರಕ ಶಕ್ತಿ ಸ್ವರೂಪನೆ
ಕಾಯೋ ನಮ್ಮನು ವಿಷ್ಣು ಸ್ವರೂಪನೆ..
@ಪ್ರೇಮ್@
08.08.2020@prem@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ